ಶಾರದಾಂಬ ಭಜನಾ ಮಂಡಳಿಯ ವತಿಯಿಂದ ಅರ್ಧ ಏಕಾಹ ಭಜನೋತ್ಸವವು ಏ.14 ರಂದು ಮತ್ತು ಏ.2.ರಿಂದ ಮನೆ ಮನೆ ಭಜನಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಕುರಿತು ಮಾ.20 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಭಜನೋತ್ಸವ ಕಾರ್ಯಕ್ರಮಕ್ಕೆ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಕುಸುಮಾಧರ ಕೆಮ್ಮೂರು, ಉಪಾಧ್ಯಕ್ಷರಾಗಿ. ಪ್ರಕಾಶ್ ಜಾಕೆ, ಕಾರ್ಯದರ್ಶಿಯಾಗಿ ನಾರಾಯಣ ಕೃಷ್ಣನಗರ , ಖಜಾಂಜಿಯಾಗಿ ಜಯರಾಮ ಕೋಟಿಯಡ್ಕ,ಉಪ ಕಾರ್ಯದರ್ಶಿಯಾಗಿ ಹೇಮಂತ ದೊಡ್ಡಮನೆ, ಭಜನ ಕಾರ್ಯಕ್ರಮದ ಉಸ್ತುವರಿ ಮಾಲಿಂಗ ಸಂಪ ಮತ್ತು ಶ್ಯಾಮ್ ಕೃಷ್ಣನಗರ ಆಯ್ಕೆಯಾಗಿದ್ದರೆ . ವೇದಿಕೆಯಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಕುದ್ವ, ಭಜನಾ ಮಂಡಳಿ ಕಾರ್ಯದರ್ಶಿ ಗುರು ಪ್ರಸಾದ್ ತೋಟ ಉಪಸ್ಥಿತರಿದ್ದರು.