ಆಲೆಟ್ಟಿ ಗ್ರಾಮದ ಬಡ್ಡಡ್ಕ-ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನ:ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಮಾ.5 ರಿಂದ 7 ರ ತನಕ ಜರಗಿದ್ದು ಅದರ ಅಂಗವಾಗಿ ಮಾ.22 ರಂದು ಕುಂಟಾರು ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ಸುದರ್ಶನ ಹೋಮವು ನಡೆಯಿತು. ಸಾಯಂಕಾಲ ಸಾಮೂಹಿಕ ಪ್ರಾರ್ಥನೆ ಯಾಗಿ ವೈದಿಕ ಪೂಜಾ ಕೈಂಕರ್ಯ ಹಾಗೂ ಹವನ ಆರಂಭಗೊಂಡು ರಾತ್ರಿ ಪೂರ್ಣಾಹುತಿಯಾಗಿ ಪ್ರಸಾದ ವಿತರಣೆಯಾಯಿತು.ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಚಂದ್ರ ಪಿ.ಕೆ,ಗೌರವಾಧ್ಯಕ್ಷೆ ಶ್ರೀಮತಿ ವೇದಾವತಿಅನಂತ ಬಡ್ಡಡ್ಕ, ಗುರುಸ್ವಾಮಿ ಜನಾರ್ಧನ ಗುಂಡ್ಯ, ದಿನೇಶ್ ಬಡ್ಡಡ್ಕ,ಪುರೋಹಿತರಾದ ರಾಮಕೃಷ್ಣ ಕಡಂಬಳಿತ್ತಾಯ, ವೆಂಕಟ್ರಾಜ್ ಭಟ್, ಕಾರ್ಯದರ್ಶಿ ಕೆ.ಕಮಲಾಕ್ಷ ಬಡ್ಡಡ್ಕ, ಗಂಗಾಧರ ಪತ್ತುಕುಂಜ, ಸತ್ಯ ಕುಮಾರ್ ಆಡಿಂಜ, ಕೋಶಾಧಿಕಾರಿ ಗಿರಿಯಪ್ಪ ನಾಯ್ಕ ಎಲಿಕ್ಕಳ ಹಾಗೂ ಎಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.
.