Breaking News

ಅಧಿಕಾರಿಗಳ ಗ್ರಾಮವಾಸ್ತವ್ಯ: ಕೆ ಪಿ ಗಿರಿಧರ್ ರಿಂದ ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಜಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೊಲ್ಲಮೊಗ್ರುವಿನಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯ ಮಾ.20 ರಂದು ನಡೆದಿದ್ದು ಕೊಲ್ಲಮೊಗ್ರು ಗ್ರಾ.ಪಂ ನ ಮಾಜಿ ಅಧ್ಯಕ್ಷ
ಕೆ ಪಿ ಗಿರಿಧರ್ ರವರು ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಯವರಿಗೆ ಎಸಿ ಮುಖಾಂತರ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಅಡಿಕೆ ಬೆಳೆಗೆ ಬಾಧಿಸಿದ ಹಳದಿ ರೋಗಕ್ಕೆ ಪರಿಹಾರ ಕೇಳಿ, ಕೊಲ್ಲಮೊಗ್ರ ಮತ್ತು ಕಲ್ಮಕಾರು ಗ್ರಾಮದಲ್ಲಿ ಭಾಗಶಃ ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡುವಂತೆ, ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಸಾರ್ವಕಾಲಿಕ ಸೇವೆ ಒದಗಿಸುವಂತೆ, ಕೊಲ್ಲಮೊಗ್ರು ಪೇಟೆಯಲ್ಲಿ ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಕರಣಿಕರ ಕಚೇರಿ, ಪಂಚಾಯತ್ ಕೇಂದ್ರಗಳಿಗೆ ಸಹಕಾರಿಯಾಗುವಂತೆ ವ್ಯವಸ್ಥಿತ ಟವರ್ ಇಲ್ಲದಿರುವ ಬಗ್ಗೆ ಮನವಿಯಲ್ಲಿ ತಿಳಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯತ್ ರಸ್ತೆಯನ್ನು ದುರಸ್ಥಿ ಪಡಿಸುವಂತೆ, ಚುನಾವಣಾ ಸಂದರ್ಭದಲ್ಲಿ ರೈತರ ಕೋವಿಯನ್ನು ಪೋಲಿಸ್ ಠಾಣೆಯಲ್ಲಿ ಡಿಪಾಸಿಟ್ ಇಡದಂತೆ, ಕಟ್ಟ ಮೈಲದಲ್ಲಿ ತುರ್ತಾಗಿ ಸೇತುವೆ ನಿರ್ಮಿಸುವಂತೆ, ಕಲ್ಮಕಾರು ಗುಳಿಕಾನದ 9 ಪರಿಶಿಷ್ಟ ಪಂಗಡದ ನಿರಾಶ್ರಿತರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದ್ದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.