Breaking News

ಕೆ.ಎಂ.ಚಂಗಪ್ಪ ಗೌಡ ಬಡ್ಡಡ್ಕ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಕೆ.ಎಂ.ಚಂಗಪ್ಪ ಗೌಡರವರು ಮಾ.23 ರಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ದಿನಗಳಿಂದ ಸುಳ್ಯ ಕೆ.ವಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಬೆಳಗ್ಗೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಇಂದಿರಾ, ಮೂವರು ಪುತ್ರರಾದ ಪುಷ್ಪರಾಜ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಪ್ರವೀಣ, ಓರ್ವ ಪುತ್ರಿ ರಂಗೋಲಿ ಫ್ಯಾಶನ್ ಮಾಲಕಿ ಪ್ರಶಾಂತಿ ಬಡ್ಡಡ್ಕ, ಸೊಸೆಯಂದಿರಾದ ಹೇಮಲತಾ, ವಿಶಾಲಾಕ್ಷಿ, ಶುಭಾಂಜಲಿ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಓರ್ವ ನಾಟಿ ವೈದ್ಯರಾಗಿ ಹುಚ್ಚು ನಾಯಿ ಕಡಿತಕ್ಕೊಳಗಾದ ಅನೇಕ ಮಂದಿ ರೋಗಿಗಳಿಗೆ ಔಷಧಿ ನೀಡುವ ಮೂಲಕ ಗುಣಪಡಿಸಿರುತ್ತಾರೆ. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.