ಮಾ.22 ರಂದು ನಿಧನರಾದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಅಮರ ಸುದ್ದಿ ಪತ್ರಿಕೆಯ ವರದಿಗಾರ ರಾಗಿದ್ದ ದಿನೇಶ್ ಮಠರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಪತ್ರಕರ್ತರ ಸಂಘದಿಂದ ಮಾ.23 ರಂದು ಸಂಘದ ಕಚೇರಿಯಲ್ಲಿ ನಡೆಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಅಮರಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವೇದಿಕೆಯಲ್ಲಿದ್ದು ನುಡಿನಮನ ಸಲ್ಲಿಸಿದರು.
ಜಯಪ್ರಕಾಶ್ ಕುಕ್ಕೆಟ್ಟಿ, ಜೆ.ಕೆ. ರೈ, ದುರ್ಗಾಕುಮಾರ್ ನಾಯರ್ ಕೆರೆ, ಗಂಗಾಧರ ಮಟ್ಟಿ, ಗಣೇಶ್ ಕುಕ್ಕುದಡಿ, ಪದ್ಮನಾಭ ಅರಂಬೂರು, ಕೆ.ಟಿ.ಭಾಗೀಶ್, ವಿಶ್ವನಾಥ ಮೋಟುಕಾನ, ಸುದೀಪ್ ಕೋಟೆಮೂಲೆ, ಹಸೈನಾರ್ ಜಯನಗರ, ಶರೀಫ್ ಜಟ್ಟಿಪಳ್ಳ, ಸತೀಶ್ ಹೊದ್ದೆಟ್ಟಿ, ವಿನಯ ಜಾಲ್ಸೂರು, ಲೋಕೇಶ್ ಗುಡ್ಡೆಮನೆ, ಗಣೇಶ್ ಮಾವಂಜಿ, ವೆಂಕಟೇಶ ನುಡಿನಮನ ಸಲ್ಲಿಸಿದರು.
ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.