ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಮಾ.24 ರಂದು ಗಣಪತಿ ಹೋಮ, ಮತ್ತು ಶತರುದ್ರಾಭಿಷೇಕ ಹಾಗೂ 36ನೇ ವರ್ಷದ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದ್ದು ರಾತ್ರಿ ಶ್ರೀ ದುರ್ಗಾಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ.
ಅಪರಾಹ್ನ ಭಜನಾ ಕಾರ್ಯಕ್ರಮ ಜರಗಲಿದ್ದು ಸಂಜೆ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇಲ್ಲಿಯ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ “ಬಿಲ್ಲ ಹಬ್ಬ” ನಡೆದು ಬಳಿಕ ರಾತ್ರಿ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಭಾ ತೀರ್ಥಹಳ್ಳಿ ಅವರಿಂದ “ಶ್ರೀ ಧರ್ಮದೈವ ರಕ್ತೇಶ್ವರಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬೆಳಗ್ಗೆ ಕಂದ್ರಪ್ಪಾಡಿ ಮತ್ತು ತಳೂರಿನಿಂದ ದೈವಗಳ ಭಂಡಾರ ಬಂದು ಮಾ.25 ರ ಬೆಳಗ್ಗೆ ರಾಜ್ಯದೈವ ಮತ್ತು ಪುರುಷ ದೈವದ ನೇಮೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.