Breaking News

ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ;

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಸರಿಯೇ?

ಮಾಸ್ಕ್ ಧರಿಸದೇ ಇದ್ದರೆ ದಂಡ ವಸೂಲಿ ವರದಿಯನ್ನು ನೋಡಿ ನಗಬೇಕೋ…. ಅಳಬೇಕೋ… ಅರಿಯದಂತಾಯಿತು. ಕಳೆದ ಒಂದು ವರ್ಷದಿಂದ ಕೊರೋನಾ ಎಂಬ ಪೆಡಂಭೂತವನ್ನು ಮುಂದಿಟ್ಟುಕೊಂಡು ಜನ ಸಾಮಾನ್ಯರನ್ನು ದೋಚುವುದನ್ನು (ಅಧಿಕಾರಿಗಳ ಮೂಲಕ) ಓ ಪರಮಾತ್ಮ ನೀನಾದರೂ ಒಮ್ಮೆ ಕಣ್ಣು ತೆರೆದು ನೋಡಬಾರದೇ…?


ಒಂದು ಕಡೆಯಿಂದ ಶಾಲಾ -ಕಾಲೇಜುಗಳು ಇಲ್ಲದಿದ್ದರೂ ಫೀಸ್ ಕಟ್ಟಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳು ದಿನ ಬೆಳಗಾದರೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಬೆಲೆ ಶರವೇಗದಲ್ಲಿ ಓಡುತ್ತಿದೆ. ಗ್ಯಾಸ್ ಬೆಲೆ ದುಪ್ಪಟ್ಟು ಆಗಿದೆ. ಖಾಸಗಿ ನೌಕರರಿಗೆ ತಿಂಗಳಲ್ಲಿ ೧೫ ದಿನದ ಸಂಬಳ. ಅಂಗಡಿ, ಮುಂಗಟ್ಟುಗಳಿಗೆ ವ್ಯಾಪಾರ ಇಲ್ಲದೇ ಪರದಾಡುವ ಪರಿಸ್ಥಿತಿ. ಇದೆಲ್ಲದರ ಮಧ್ಯೆ ನಡೆದಾಡುವಾಗಲೂ ದಂಡದ ಬೆದರಿಕೆಯಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.
ಸರಕಾರದ ಯಾವ ಇಲಾಖೆಯಲ್ಲಿಯೂ ಜನ ಸಾಮಾನ್ಯರ ಕೆಲಸಗಳು ಕೋವಿಡ್-೧೯ ರಡಿಯಲ್ಲಿ ಬೇಗ ಆಗಿದೆಯೇ? ಆದಾಯ ಪ್ರಮಾಣ ಪತ್ರದಂತಹ ಕೆಲಸಗಳಿಗೂ ತಿಂಗಳುಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷನೂಗಟ್ಟಲೆ ಸರಕಾರಿ ಕಚೇರಿಗಳಿಗೆ ಅಲೆದಾಡುವ ಜನಸಾಮಾನ್ಯರಿಗೆ ಯಾಕೆ ಈ ಪರಿಯ ಶಿಕ್ಷೆ.
ಯಾವ ಇಲಾಖೆಯ ಉನ್ನತ ಅಧಿಕಾರಿ ಜನಸಾಮಾನ್ಯರ ಕೆಲಸಗಳಿಗೆ ಸ್ಪಂದಿಸುತ್ತಾರೆ.
ಸಾಮಾನ್ಯ ಕೆಲಸಕ್ಕೂ ಅರ್ಜಿ ಹಿಡಿದು ಅಲೆದಾಡುವುದನ್ನು ಯಾರು ಕೇಳುವವರು. ಆಯಾಯ ಇಲಾಖೆ ಅವರ ಇಲಾಖೆಯ ಕೆಲಸಗಳನ್ನು(ಜನಸಾಮಾನ್ಯರ) ಬಾಕಿಯಾಗದಂತೆ ಮಾಡಿದಾಗ ಮಾತ್ರ ಜನ ಸಾಮಾನ್ಯರ ಓಡಾಟ ಕಡಿಮೆಯಾಗಬಹುದೇ ಹೊರತು ದಂಡ ಪಿಂಡಗಳಿಂದ ಅಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪಿ.ಎಸ್.ಗಂಗಾಧರ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.