Breaking News

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಸುಳ್ಯ ಭೇಟಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

ವೈದ್ಯರ ಮೇಲಿನ ಧಾಳಿ ತಡೆಗೆ ಕೇಂದ್ರ ಕಾನೂನು ತರಬೇಕು : ಡಾ. ವೆಂಕಟಾಚಲಪತಿ

 

ಸ0ಕಷ್ಟ ಕಾಲದಲ್ಲಿ ಆಪತ್ಫಾಂದವರ0ತೆ ಕೆಲಸ ಮಾಡುವ ವೈದ್ಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಯಾವುದೋ ಒಂದು ಕಾರಣಕ್ಕೆ ಸಾರ್ವಜನಿಕರಿಂದ ಕಾರ್ಯನಿರತ ವೈದ್ಯರು, ಸಿಬ್ಬಂದಿಗಳು ಮತ್ತು ಆರೋಗ್ಯ ಸಂಸ್ಥೆಗಳ ಮೇಲೆ ಧಾಳಿ, ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಇಂತಹ ಧಾಳಿಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಜಾಮೀನು ರಹಿತ ಕಾನೂನು ಜಾರಿಗೆ ತರಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ವೆಂಕಟಾಚಲಪತಿ ಹೇಳಿದರು.

ಅವರು ಇಂದು ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಶಾಖೆಗೆ ಭೇಟಿ ನೀಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ವೈದ್ಯರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ವೈದ್ಯರಿಂದ ಕೆಲಸ ಮಾಡಲು ಆಗುತ್ತಿಲ್ಲ. ವೈದ್ಯರ ಮೇಲೆ ದಬ್ಬಾಳಿಕೆ, ಮಾನಹರಣ ಮಾಡುವುದು ತಪ್ಪು. ದೌರ್ಜನ್ಯ ನಡೆಸುವವರ ಮೇಲೆ ಜಾಮೀನು ರಹಿತ ಶಿಕ್ಷೆ ನೀಡುವ ಕಾನೂನು ಜಾರಿಗೆ ತರುವ ಮೂಲಕ ವೈದ್ಯರಿಗೆ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ನಕಲಿ ವೈದ್ಯರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬ ನಿಪುಣ ವೈದ್ಯನಿಗೆ ಸಮಾನಾಗಿ ೧೦ ಜನ ನಕಲಿ ವೈದ್ಯರುಗಳು ಕಾರ್ಯಚರಿಸುತ್ತಿದ್ದಾರೆ. ಇವರನ್ನು ನಿಯಂತ್ರಿಸುವ ಕೆಲಸ ಸರಕಾರ ಮಾಡಬೇಕು. ಕಡಿಮೆ ಅರ್ಹತೆ ಹೊಂದಿರುವವರನ್ನು ವೈದ್ಯರೆಂದು ಬಿಂಬಿಸುವ ಕೆಲಸ ಆಗುತ್ತಿದೆ. ಗ್ರಾಹಕರ ರಕ್ಷಣಾ ಕಾಯಿದೆಯಲ್ಲಿ ವೈದ್ಯರಿಗೆ ವಿಧಿಸುವ ದಂಡ ಪರಿಹಾರದ ಮೊತ್ತಕ್ಕೆ ಒಂದು ಮಿತಿ ನಿಗದಿ ಮಾಡಬೇಕು ಎಂದ ಅವರು ಹೆಣ್ಣು ಬ್ರೂಣ ಪತ್ತೆ ಮಾಡುವ ವೈದ್ಯರುಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಿರಾಪರಾಧಿಗಳಿಗೆ ಶಿಕ್ಷೆ ಆಗಬಾರದು. ಇದರಲ್ಲಿ ಭಾರತೀಯ ವೈದ್ಯಕೀಯ ಸಂಘ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘದ ಪದಾದಿಕಾರಿ ಜಿ.ಕೆ.ಭಟ್, ಡಾ. ರವೀಂದ್ರ, ಸುಳ್ಯ ಶಾಖೆಯ ಅಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಬಿ.ಎನ್, ಕಾರ್ಯದರ್ಶಿ ಡಾ. ರವಿಶಂಕರ್, ಡಾ. ಮೋಹನ್ ಅಪ್ಪಾಜಿ ಡಾ. ಗೀತಾ ದೊಪ್ಪ, ಡಾ. ಗಣೇಶ್ ಕೆ.ಕೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.