Breaking News

ಸಂಪೂರ್ಣ ಲಾಕ್‌ಡೌನ್‌ಗೆ ಇಂದಿಗೆ ಒಂದು ವರ್ಷ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೊರೋನಾ ಹಿನ್ನಲೆಯಲ್ಲಿ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬಂದು ಇಂದಿಗೆ ಒಂದು ವರ್ಷ ತುಂಬಿದೆ. ಕೊರೋನಾ ಹರಡುವುದನ್ನು ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಮಾ. 21ರಂದು ಲಾಕ್‌ಡೌನ್ ಘೋಷಿಸಿದ್ದರು.
ಕಳೆದ ಜ. 3೦ರಂದು ಕೇರಳದಲ್ಲಿ ಪ್ರಥಮ ಕೊರೋನಾ ಪ್ರಕರಣ ದಾಖಲಾಗಿತ್ತು. ಮಾ. 22ರ ಬೆಳಿಗ್ಗೆ ಬೆಳಗ್ಗಿನಿಂದ ರಾತ್ರಿಯ ತನಕ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಮಾ. 24 ರ ಮಧ್ಯರಾತ್ರಿಯಿಂದ ಎ. 14 ರವರೆಗೆ ಲಾಕ್‌ಡೌನ್ ಘೋಷಿಸಲಾಯಿತು. ಎ. ೧೪ರಂದು ಲಾಕ್‌ಡೌನನ್ನು ಮೇ. 3ರವರೆಗೆ ವಿಸ್ತರಿಸಲಾಯಿತು. ಮೇ. 1ರಂದು ಮತ್ತೆ ಮೇ.17 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಘೋಷಣೆ ನಡೆಯಿತು. ಮೇ. 17ರಂದು ಮೇ. 31ರವರೆಗೆ ಲಾಕ್ ವಿಸ್ತರಿಸಲಾಯಿತು. ಹೀಗೆ ಸುಮಾರು 2 ತಿಂಗಳ ಕಾಲ ದೇಶ ಲಾಕ್‌ಡೌನ್ ಸ್ಥಿತಿಯಲ್ಲಿ ಮುಂದುವರಿಯಿತು. ಮೇ. 3೦ರಂದು ಮೊದಲ ಬಾರಿಗೆ ಅನ್‌ಲಾಕ್ ಘೋಷಿಸಿದ ಕೇಂದ್ರ ಸರಕಾರ ಈ ಕುರಿತ ಮಾರ್ಗಸೂಚಿಗಳನ್ನು ಹಂತಹಂತವಾಗಿ ಪರಿಷ್ಕರಿಸಿತು.
ಕೊರೋನಾ ಲಾಕ್‌ಡೌನ್ ಸುಳ್ಯವನ್ನು ಬಹಳಷ್ಟು ತಟ್ಟಿತು. ಜನಜೀವನ ಸ್ತಬ್ಧವಾಯಿತು. ಎಲ್ಲರೂ ಮನೆಯಲ್ಲೇ ಕೂರುವಂತಾಯಿತು. ಅಲ್ಲಲ್ಲಿ ಕಿಟ್‌ಗಳ ವಿತರಣೆ ನಡೆಯಿತು. ಈ ಮಧ್ಯೆ ಕೊರೋನಾ ಕೂಡಾ ಸುಳ್ಯ ತಾಲೂಕಿನಲ್ಲೂ ಅಟ್ಟಹಾಸ ಮೆರೆಯಿತು. ದೂರದಲ್ಲಿದ್ದ ಕುಟುಂಬ ಹತ್ತಿರವಾಯಿತು. ವ್ಯಾಪಾರ ವಹಿವಾಟುದಾರರಿಗೆ ಭಾರೀ ನಷ್ಟ ಸಂಭವಿಸಿದರೆ, ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿತು. ಅಂದು ಮುಚ್ಚಿದ್ದ ಶಾಲೆಗಳು ಇಂದು ಕೂಡಾ ಪೂರ್ತಿಯಾಗಿ ತೆರೆದುಕೊಂಡಿಲ್ಲ. ಇದೀಗ ಒಂದು ವರ್ಷದ ಬಳಿಕವೂ ಕೊರೋನಾ ದೂರವಾಗದಿದ್ದರೂ ಅದರ ಪರಿಣಾಮ ಎದುರಿಸಲು ಜನ ಸಿದ್ಧರಾಗಿದ್ದಾರೆ. ಕೊರೋನಾ ವ್ಯಾಕ್ಸಿನ್ ಕೂಡಾ ಬಂದು ಲಸಿಕೆ ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.