ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಗತ್ ಸಿಂಗ್,ರಾಜಗುರು,ಸುಖದೇವರ ಹುತಾತ್ಮ ದಿನದ ಅಂಗವಾಗಿ ವೀರ ನಮನ ಕಾರ್ಯಕ್ರಮ ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ಮಾ.24 ರಂದು ನಡೆಯಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ ವೀರ ನಮನ ಸಲ್ಲಿಸಿದರು.
ಮಂಗಳೂರು ವಿಭಾಗ ಸಂಚಾಲಕ ಸಂದೇಶ್ ರೈ ಮಜಕ್ಕಾರು ಪ್ರಸ್ತಾವಿಕ ಮಾತನಾಡಿದರು.
ಪುತ್ತೂರು ಜಿಲ್ಲಾ ಸಂಚಾಲಕ ಹಿತೇಶ್ ಕಟ್ರಮನೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ನಗರ ಅಧ್ಯಕ್ಷ
ಕುಲದೀಪ್ ಪೆಲ್ತಡ್ಕ ಸ್ವಾಗತಿಸಿ,ಸುಳ್ಯ ನಗರ ಕಲಾ ಪ್ರಮುಖ್ ಸಿಂಚನಾ ವಂದಿಸಿದರು. ಸುಳ್ಯ ನಗರ ಕಾರ್ಯದರ್ಶಿ ರುಚಿತ್ ರೈ,
ಕೆ ಎಸ್ ಎಸ್ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಹಿತ್ ಮುಚ್ಚಾರ ,ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಚೆನ್ನಕೇಶವ ದೇವಸ್ಥಾನ ಬಳಿ ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ವಿದ್ಯಾರ್ಥಿಗಳು ಆಗಮಿಸಿದರು.