ಹರಿಹರ ಪಲ್ಲತ್ತಡ್ಕ ಮಹಿಳಾ ಗ್ರಾಮ ಸಭೆ ಮತ್ತು ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹರಿಹರ ಪಲ್ಲತ್ತಡ್ಕ ಇದರ ಮಾಸಿಕ ಸಭೆ ಪಂಚಾಯತ್ ಸಭಾ ಭವನದಲ್ಲಿ ಮಾ.24 ರಂದು ನಡೆಯಿತು.
ಅಧ್ಯಕ್ಷ ತೆಯನ್ನು ಪಂಚಾಯತ್ ಉಪಾಧ್ಯಕ್ಷ ವಿಜಯ ಅಂಙಣ ವಹಿಸಿದ್ದರು. ಸಭೆಯಲ್ಲಿ ಮಹಿಳೆಯರ ಬೇಡಿಕೆ ಮತ್ತು ಸಮಸ್ಯೆ ಗಳ ಬಗ್ಗೆ ಚರ್ಚಿಸಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಮಾಹಿತಿ ನೀಡಲಾಯಿತು. ಬೆಟ್ಟುಮಕ್ಕಿಯಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತಿದ್ದು ಹಕ್ಕು ಪತ್ರ ಲಭಿಸಿಲ್ಲ ಎಂದು ಯಶೋದಾ ಕೇಳಿದರು. ಗ್ರಾಮದಲ್ಲಿ ವೈನ್ ಶಾಪ್ ತರೆಯಲು ಪಂಚಾಯತ್ ಒಪ್ಪಿದೆಯಂತೆ ಹೌದಾ ಎಂದು ನಾಗಮಣಿ ಬಾಳುಗೋಡು ಕೇಳಿದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರು ಗಳಾದ ದಿವಾಕರ ಮುಂಡಾಜೆ, ಬಿಂಧು ಪಿ, ಪದ್ಮಾವತಿ ಕಲ್ಲೇಮಠ, ಹಾಜರಿದ್ದರು.
ಮಹಿಳಾ ಗ್ರಾಮ ಸಭೆ ಬಳಿಕ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಭೆ ನಡೆಯಿತು.
ತಾಲೂಕು ವಲಯ ಮೆಲ್ವಿಚಾರಕರಾದ ಮಹೇಶ್ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟ ಅಧ್ಯಕ್ಷೆ ಶರ್ಮಿಳಾ ಕಟ್ಟೆಮನೆ, ಮುಖ್ಯ ಪುಸ್ತಕ ಬರಹಗಾರರು ವಿಮಲಾಕ್ಷಿ, ವೇದಾವತಿ ಹರಿಹರ, ಎಲ್ ಸಿ ಆರ್ ಪಿ ವನಿತಾ, ಸವಿತಾ ಉಪಸ್ಥಿತರಿದ್ದರು.
ವರದಿ: ಕುಶಾಲಪ್ಪ ಕಾಂತುಕುಮೇರಿ