ಮಾ.24 ರ ಸಂಜೆ ಸುರಿದ ಗಾಳಿ ಮಳೆಗೆ ಕಳಂಜ, ಶೇಣಿ, ಚೊಕ್ಕಾಡಿ ಭಾಗದಲ್ಲಿ ಅಪಾರ ಹಾನಿ ಸಂಭವಿಸಿದೆ.
ಶೇಡಿಕಜೆ ಬಳಿ ಎಚ್. ಟಿ ಲೈನ್ ಮೇಲೆ ಮರಬಿದ್ದಿದೆ. ಪಾಂಡಿಪಾಲಿನಲ್ಲಿ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕಂಬ ರಸ್ತೆಗೆ ಬಿದ್ದು ರಸ್ತೆ ಒಂದು ಗಂಟೆ ಬ್ಲಾಕ್ ಆಗಿತ್ತು. ಕಜೆಮೂಲೆ ಎಂಬಲ್ಲಿ ರಬ್ಬರ್ ಕೂಪೊಂದರ ಒಳಗೆ ಎಚ್ ಟಿ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದಿದೆ. ಚೊಕ್ಕಾಡಿ ಭಾಗದಲ್ಲಿ ಗಾಳಿಗೆ ತೆಂಗಿನ ಮರ, ಅಡಿಕೆ ಮರಗಳು,ರಬ್ಬರ್ ಗಿಡಗಳು ಮುರಿದು ಬಿದ್ದಿವೆ. ವೆಂಕಟ್ರಮಣ ಭಟ್ ಪವನ ಮುಂಡುಗಾರು, ದುಗ್ಗಪ್ಪ ಗೌಡ ಪಾಂಡಿಪಾಲು, ಮಂಜುನಾಥ ಭಟ್ ಶೇಡಿಕಜೆ, ಶೇಷಪ್ಪ ಗೌಡ ಕಜೆಮೂಲೆ, ದೇವಣ್ಣ ಗೌಡ, ಬಾಲಕೃಷ್ಣ, ಹರಿಪ್ರಸಾದ್ ರೈ ಶೇಣಿ, ಮಾದವ ಗೌಡ ಪೂಜಾರಿಮನೆ, ಇನ್ನೂ ಹಲವರಿಗೆ ಅಡಿಕೆ, ತೆಂಗು ಮರಗಳು ಮುರಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ಮೆಸ್ಕಾಂ ನವರು ವಿದ್ಯತ್ ಲೈನ್ ದುರಸ್ತಿಯಲ್ಲಿ ತೊಡಗಿದ್ದಾರೆ.