ನಿಂತಿಕಲ್ಲು; ನಮ್ಮೂರು ನಮ್ಮ ಹೊಣೆ ಕಾರ್ಯಕ್ರಮ

Advt_Headding_Middle
Advt_Headding_Middle

ಸ್ವಚ್ಚತೆಯ ಬಗ್ಗೆ ಎಸ್.ಐ.ಆಂಜನೇಯ ರೆಡ್ಡಿ ವಿದ್ಯಾರ್ಥಿಗಳಿಗೆ ಪಾಠ
ನಮ್ಮೂರು ನಮ್ಮ ಹೊಣೆ ಕಾರ್ಯಕ್ರಮದ ಅಂಗವಾಗಿ ಎಣ್ಮೂರು ನಿಂತಿಕಲ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ ಇಂದು ನಡೆಯಿತು. ಸಂಘಟಕರಾದ ರಮೇಶ್ ಕೋಟೆ ಮತ್ತು ಸುಜಿತ್ ರೈ ಪಟ್ಟೆ ಯವರ ನೇತೃತ್ವದಲ್ಲಿ ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯ ನೇಮೋತ್ಸವ ಪೂರ್ವಭಾವಿಯಾಗಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಬೆಳ್ಳಾರೆ ಆರಕ್ಷಕ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮಾತನಾಡಿ ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆದರೆ ಮಹಾತ್ಮ ಗಾಂಧೀಜಿಯ ಕನಸು ನನಸಾಗುತ್ತದೆ.ಆನ್ಲೈನ್ ಹೊರತುಪಡಿಸಿ ವಿದ್ಯಾರ್ಥಿಗಳು ಅನಗತ್ಯವಾಗಿ ಮೊಬೈಲ್ ಉಪಯೋಗಿಸಬಾರದು.ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಣ್ಮೂರು ಹೈಸ್ಕೂಲ್ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿ ಶ್ರೀಮತಿ ಶೀತಲ್ ಯು.ಕೆ.,ಶಿಕ್ಷಕ ವೃಂದ,ಕೆ.ಎಸ್.ಜಿ.ಐಟಿಐ ಉಪನ್ಯಾಸಕರಾದ ಸುದೀರ್ ಎಂ.ವಿ.,ಶೇಖರ ಗೌಡ ಕುದ್ಪಾಜೆ ಹಾಗೂ ವಿದ್ಯಾರ್ಥಿಗಳು, ಎಡಮಂಗಲ ಗ್ರಾ.ಪಂ.ಸದಸ್ಯ ಮಾಯಿಲಪ್ಪ ಗೌಡ,ಮಾಜಿ ಅಧ್ಯಕ್ಷೆ ರಾಜೀವಿ ರೈ ಕಲ್ಲೇರಿ,ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ‌.ಪ್ರಭಾಕರ ರೈ,ವರ್ತಕರಾದ ದೀಕ್ಷಿತ್ ಬೆಳ್ಳಾರೆ,ಎನ್.ಟಿ‌.ವಸಂತ, ಸುನಿಲ್ ರೈ ಬಳ್ಕಾಡಿ,ಸ್ಥಳೀಯ ವಾಹನ ಚಾಲಕ ಮಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟಕ,ಮುಖ್ಯ ವಿಮಾ ಸಲಹೆಗಾರರಾದ ಸುಜಿತ್ ರೈ ಪಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.