ತಲಮಾ.27 ಶನಿವಾರದಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆಲ್ಲೂರು ಕಮ್ರಾಜೆ ಗ್ರಾಮದ 45ರಿಂದ 59 ವರ್ಷದೊಳಗಿನ ರಕ್ತದೊತ್ತಡ, ಮದುಮೇಹ, ಕ್ಯಾನ್ಸರ್, ಉಬ್ಬಸ ಮತ್ತಿತರ ಅನಾರೋಗ್ಯವಿರುವ ನಾಗರೀಕರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ನೆಲ್ಲೂರು ಕೆಮ್ರಾಜೆಯ ಆಯಾಯ ಊರಿನಿಂದ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವರಿಗೆ ಬಸ್ಸಿನ ವ್ಯವಸ್ಥೆ ಇದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.
ಬಸ್ ರೂಟ್ : ಕಂಜಿಪಿಲಿ, ಅಲ್ಪೆ, ಅಡಿಕೆಹಿತ್ತಿಲು, ಹರ್ಲಡ್ಕ ಜಿರುಮುಖಿ, ಎಲಿಮಲೆ, ಗಟ್ಟಿಗಾರು, ಕಜೆ, ಮಂದ್ರಪಾಡಿ, ಹೊಟ್ಟುಜೋಡಿ, ಕೇಪಳಕಜೆಯ 60ವರ್ಷ ಮೇಲುಪಟ್ಟ ನಾಗರೀಕರಿಗೆ ಬೆಳಿಗ್ಗೆ 10 ಗಂಟೆಗೆ ಬಸ್ಸಿನ ವ್ಯವಸ್ಥೆ ಇದೆ.
ಹಾಗೂ ನಾರ್ಣಕೆ, ದಾಸನಕಜೆ, ಜಬಳೆ, ಗುಡ್ಡೆ ಕಡೆಯವರಿಗೆ ಮಧ್ಯಾಹ್ನ 12 ಗಂಟೆಗೆ ಬಸ್ಸಿನ ವ್ಯವಸ್ಥೆ ಇದೆ.
ಗ್ರಾಮಸ್ಥರು ತಮ್ಮ ಆಧಾರ್ ಕಾಡ್೯ ಹಾಗೂ ವೈದ್ಯಕೀಯ ಪ್ರಮಾಣಪತ್ರ ತೋರಿಸಿ ಕೊರೊನಾ ಲಸಿಕೆ ಯನ್ನು ಪಡೆದುಕೊಳ್ಳಬಹುದು.