ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಸದಸ್ಯರು ಪಡೆದ ಕೃಷಿ ಸಾಲದ ಕಂತಿನ ಡಿಮಾಂಡ್ ನೋಟಿಸನ್ನು ಈಗಾಗಲೇ ಕಳುಹಿಸಲಾಗಿದ್ದು ಸದಸ್ಯರು ಪಡೆದ ಕೃಷಿ ಸಾಲದ ಕಂತುಗಳನ್ನು ಮಾ. 31ರೊಳಗೆ ಪಾವತಿಸಿದರೆ ಸರಕಾರದ ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಡಿಮಾಂಡ್ ನೋಟಿಸ್ ಸಿಗದೇ ಇದ್ದವರು ಕೂಡಲೇ ಬ್ಯಾಂಕಿಗೆ ಬಂದು ಅಥವಾ ಬ್ಯಾಂಕಿನ ದೂರವಾಣಿ ಸಂಖ್ಯೆಗೆ (08257-230304) ಕರೆ ಮಾಡಿ ಕಟ್ಟಬೇಕಾದ ಸಾಲದ ಕಂತಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.
ಸಾಲಗಾರರ ಅನುಕೂಲಕ್ಕಾಗಿ ಮಾ. 27 ಶನಿವಾರ ಮತ್ತು 28 ಭಾನುವಾರದಂದು ಬ್ಯಾಂಕಿನ ವ್ಯವಹಾರ ಎಂದಿನಂತೆ ಇರಲಿದೆ. ಬ್ಯಾಂಕಿನ ಸದಸ್ಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸುಳ್ಯ PLD ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಬಿಳಿಮಲೆ ಮತ್ತು ವ್ಯವಸ್ಥಾಪಕರಾದ ಧನರಾಜ್ ಕೆ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.