ರೂ.9 ಕೋಟಿ 91 ಲಕ್ಷ ಆದಾಯ ನಿರೀಕ್ಷೆ
11 ಕೋಟಿ 16 ಲಕ್ಷ ನಿರೀಕ್ಷಿತ ಖರ್ಚು
ಸುಳ್ಯ ನಗರ ಪಂಚಾಯತ್ನ 2021-22 ನೇ ಸಾಲಿನ ಮುಂಗಡ ಆಯವ್ಯಯ ಮಂಡನಾ ಸಭೆ ಇಂದು ಸುಳ್ಯ ನ.ಪಂ. ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಬಜೆಟ್ ಮಂಡಿಸಿದರು. 2021-22 ನೇ ಸಾಲಿಗೆ ವಿವಿಧ ಮೂಲಗಳಿಂದ ನ.ಪಂ. ಗೆ 9 ಕೋಟಿ 91 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. 11 ಕೋಟಿ 16 ಲಕ್ಷ ನಿರೀಕ್ಷಿತ ಖರ್ಚು ಅಂದಾಜು ಮಾಡಿರುವುದಾಗಿ ಅವರು ಹೇಳಿದರು.
ಆದಾಯದ ವಿವರ ನೀಡಿದ ಅವರು, ಕಟ್ಟಡಗಳಿಂದ ಬಾಡಿಗೆ ರೂ 39 ಲಕ್ಷದ 11 ಸಾವಿರ, ನೆಲ ಬಾಡಿಗೆ 73 ಸಾವಿರ ರೂ, ದಂಡ ಮತ್ತು ಜುಲ್ಮಾನೆ – ಇತರೆ 2 ಲಕ್ಷದ 5೦ ಸಾವಿರ, ಕಟ್ಟಡ ಪರವಾನಿಗೆ ನಿವೇಶನಾ ಉತ್ತಮತಾ ಸುಧಾರಣಾ ಶುಲ್ಕಗಳು 3 ಲಕ್ಷದ 5೦ ಸಾವಿರ, ಅಭಿವೃದ್ಧಿ ಶುಲ್ಕಗಳು 2 ಲಕ್ಷದ 5೦ ಸಾವಿರ, ವ್ಯಾಪಾರ ಪರವಾನಿಗೆ ಶುಲ್ಕಗಳು 8 ಲಕ್ಷದ 5೦ ಸಾವಿರ, ಕಟ್ಟಡ ಪರವಾನಿಗೆ 3 ಲಕ್ಷದ 75 ಸಾವಿರ ರೂ, ಜಾತ್ರೆ ಮತ್ತು ಕಾರ್ಯಕ್ರಮಗಳ ಮೇಲಿನ ಶುಲ್ಕ 75 ಸಾವಿರ ರೂ, ರಸ್ತೆ ಅಗೆತ ಮತ್ತು ಪುನಃ ಸ್ಥಾಪನೆ ಶುಲ್ಕ 2 ಲಕ್ಷದ 5೦ ಸಾವಿರ ರೂ, ಘನತ್ಯಾಜ್ಯ ನಿರ್ವಹಣಾ ಶುಲ್ಕಗಳಿಂದ 15 ಲಕ್ಷ ರೂ, ಪುರಭವನ/ ಒಳಾಂಗಣ ಕ್ರಿಡಾಂಗಣ ಬಾಡಿಗೆ 1ಲಕ್ಷ ರೂ, ನೀರು ಸರಬರಾಜು ಶುಲ್ಕದಿಂದ 1 ಕೋಟಿ 22 ಲಕ್ಷ, ನೀರು ಸರಬರಾಜು ಸಂಪರ್ಕ ಶುಲ್ಕ 2 ಲಕ್ಷದ 16 ಸಾವಿರ, ಹೂ ಮಾರಾಟ ಸ್ಟಾಲ್ನಿಂದ ಬರುವ ಆದಾಯ 1 ಲಕ್ಷದ 5೦ ಸಾವಿರ, ಮೀನು ಮಾರುಕಟ್ಟೆ ಬಾಡಿಗೆ 1೦ ಲಕ್ಷದ 67 ಸಾವಿರ ರೂ, ರಾಜ್ಯ ಸರಕಾರದಿಂದ ಸಂಗ್ರಹಿಸಲ್ಪಟ್ಟ ಸ್ಟಾಂಪ್ ಶುಲ್ಕದ ಸರ್ ಜಾರ್ಜ್ 2 ಲಕ್ಷದ 5೦ ಸಾವಿರ ರೂ, ಬ್ಯಾಂಕ್ ಖಾತೆಗಳಿಂದ ಬಡ್ಡಿ 2 ಲಕ್ಷದ ೫೦ ಸಾವಿರ ರೂ, ಆಸ್ತಿ ತೆರಿಗೆ ಆದಾಯ 1 ಕೋಟಿ 92 ಲಕ್ಷ ರೂ, ಆಸ್ತಿ ತೆರಿಗೆ ದಂಡನೆ೫ ಲಕ್ಷ ರೂ, ಉಪಕರ ಸಂಗ್ರಹಣೆ ಶುಲ್ಕ 3 ಲಕ್ಷದ 96 ಸಾವಿರ, ವೇತನ ಅನುದಾನ 72 ಲಕ್ಷ, ಮುಕ್ತ ನಿಧಿ ಅನುದಾನ 33 ಲಕ್ಷ ರೂ, 15 ನೇ ಹಣಕಾಸು ಅನುದಾನ 86 ಲಕ್ಷ ರೂ, ಎಸ್.ಎಫ್.ಸಿ. ಅನುದಾನ ೨ ಕೋಟಿ ರೂ ಹೀಗೆ ಇನ್ನಿತರ ಮೂಲಗಳು ಸೇರಿ ಒಟ್ಟು 9 ಕೋಟಿ 91 ಲಕ್ಷ ಆದಾಯದ ನಿರೀಕ್ಷೆ ಇದೆ ಎಂದು ಹೇಳಿದರು. ಬಳಿಕ ನಿರೀಕ್ಷಿತ ವೆಚ್ಚದ ವಿವರಗಳು ನೀಡಿದ ಅವರು, ಮುದ್ರಣ, ಲೆಖನ ಸಾಮಾಗ್ರಿಗಳಿಗೆ ೩ ಲಕ್ಷ ರೂ, ಪ್ರಯಾಣ ಮತ್ತು ವಾಹನ ಭತ್ಯೆ 3 ಲಕ್ಷ ರೂ, ಲೆಕ್ಕ ತಪಾಸನಾ ಶುಲ್ಕ ಕಾನೂನು ವೆಚ್ಚ 7 ಲಕ್ಷದ 5೦ ಸಾವಿರ ರೂ, ಜಾಹಿರಾತು ಮತ್ತು ಪ್ರಚಾರಕ್ಕೆ ೪ ಲಕ್ಷ ರೂ, ಕಚೇರಿ ವೆಚ್ಚಗಳು ದೂರವಾಣಿ ಅಂಚೆ ಚೀಟಿ ಇತ್ಯಾದಿ 2 ಲಕ್ಷದ 5೦ ಸಾವಿರ ರೂ, ಇತರೆ ಸಾಮಾನ್ಯ ವೆಚ್ಚ1೦ ಲಕ್ಷ ರೂ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆ 1೦ ಲಕ್ಷ ರೂ, ಕಚೇರಿ ಉಪಕರಣಗಳ ದುರಸ್ತಿ ನಿರ್ವಹಣೆ 5 ಲಕ್ಷ ರೂ, ದೇಣಿಗೆಗಳಿಗೆ 2 ಲಕ್ಷದ 5೦ ಸಾವಿರ ರೂ, ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹಧನ 1 ಲಕ್ಷದ 5೦ ಸಾವಿರ ರೂ, ಹೊರಗುತ್ತಿಗೆ ವೆಚ್ಚಗಳು ಸಿಬ್ಬಂದಿ, ವಾಹನ ಬಾಡಿಗೆ 25 ಲಕ್ಷ ರೂ, ಕೌನ್ಸಿಲ್ ಸಂಬಂಧಿತ ಪ್ರಯಾಣ 1 ಲಕ್ಷ ರೂ, ಕೌನ್ಸಿಲ್ ಗೌರವಧನ ಸಭಾ ವೆಚ್ಚ ೫ ಲಕ್ಷದ 5೦ ಸಾವಿರ ರೂ, ರಸ್ತೆ ದುರಸ್ತಿ ಕಾಂಕ್ರಿಟೀಕರಣ 4೦ ಲಕ್ಷ ರೂ, ಚರಂಡಿ ದುರಸ್ತಿ 2೦ ಲಕ್ಷ ರೂ, ದಾರಿ ದೀಪ ಹೊರಗುತ್ತಿಗೆ 2೦ ಲಕ್ಷ ರೂ, ದಾರಿ ದೀಪ ಉಪಕರಣಗಳ ಖರೀದಿ 33 ಲಕ್ಷದ 6೦ ಸಾವಿರ ರೂ, ಸ್ಮಶಾನ ನಿರ್ವಹಣೆ 2 ಲಕ್ಷದ 5೦ ಸಾವಿರ, ಘನತ್ಯಾಜ್ಯ ವಸ್ತು ನಿರ್ವಹಣೆ ಪೌರಕಾರ್ಮಿಕ ವೇತನಕ್ಕೆ 4೦ ಲಕ್ಷ ರೂ, ಘನತ್ಯಾಜ್ಯ ವಸ್ತು ನಿರ್ವಹಣೆ ಇತರೆ ಸಾಮಾನ್ಯ ವೆಚ್ಚಗಳು 4 ಲಕ್ಷ ರೂ, ಘನತ್ಯಾಜ್ಯ ವಿಲೇವಾರಿ ವಾಹನಗಳ ದುರಸ್ತಿ ಮತ್ತು ಇಂಧನ 9 ಲಕ್ಷ ರೂ, ನೀರು ಸರಬರಾಜು ಕ್ಲೋರಿನೇಶನ್ ಬ್ಲೀಚಿಂಗ್ 7 ಲಕ್ಷದ 5೦ ಸಾವಿರ ರೂ, ನೀರು ಸರಬರಾಜು ದುರಸ್ತಿ ಮತ್ತು ನಿರ್ವಹಣೆಗೆ 5೦ ಲಕ್ಷ ರೂ, ನೀರು ಸರಬರಾಜು ಹೊರಗುತ್ತಿಗೆ ವೆಚ್ಚಗಳು 13 ಲಕ್ಷದ 8೦ ಸಾವಿರ ರೂ, ನೀರು ಸರಬರಾಜು ಇಂಧನ ವೆಚ್ಚ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳ ವಿದ್ಯುತ್ ಬಿಲ್ಲು 15 ಲಕ್ಷ ರೂ, ನೀರು ಸರಬರಾಜು ಪೈಪ್ ಲೈನ್ ವಿಸ್ತರಣೆ 5೦ ಲಕ್ಷ ರೂ, ನೀರು ಸರಬರಾಜು ಯಂತ್ರೋಪಕರಣ ಖರೀದಿ 1೦ ಲಕ್ಷ ರೂ, ಪಂ.ನಿಧಿಯಲ್ಲಿ ಶೇ.24.1೦ ಪ. ಜಾತಿ/ ಪಂಗಡಗಳ ಅಭಿವೃದ್ಧಿ ನಿಧಿಗೆ 8 ಲಕ್ಷ 95 ಸಾವಿರ ರೂ, ಪಂ.ನಿಧಿಯಲ್ಲಿ ಶೇ.7.25ರ ಇತರ ಬಡಜನರ ಅಭಿವೃದ್ಧಿಗೆ ನಿಧಿಗೆ 2 ಲಕ್ಷ 7೦ ಸಾವಿರ ರೂ, ಪಂ.ನಿಧಿಯಲ್ಲಿ ಶೇ.5 ವಿಶೇಷ ಚೇತನರ ಅಭಿವೃದ್ಧಿ ನಿಧಿಗೆ 1 ಲಕ್ಷ 86 ಸಾವಿರ, ಕಚೇರಿ ಪೀಠೋಪಕರಣ 1೦ ಲಕ್ಷ ರೂ, ಪಂಚಾಯತ್ ಆಸ್ತಿಗಳ ಗುರುತು ಮತ್ತು ಸಂರಕ್ಷಣೆ 5 ಲಕ್ಷ ರೂ, ಕನ್ಸಲ್ಟೆನ್ಸಿ ವೇತನ 3 ಲಕ್ಷದ 6೦ ಸಾವಿರ ರೂ, ನೀರು ಸರಬರಾಜು ವಿಸ್ತರಣೆ 61 ಲಕ್ಷದ 5೦ ಸಾವಿರ ರೂ, ಎಸ್.ಎಫ್.ಸಿ. ವೇತನಾನುದಾನದಲ್ಲಿ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ವಂತಿಗೆ 72 ಲಕ್ಷ, ಎಸ್ಎಫ್.ಸಿ. ವಿದ್ಯುಚ್ಛಕ್ತಿ ಅನುದಾನದಲ್ಲಿ ನೀರು ಸರಬರಾಜು ಮತ್ತು ದಾರಿದೀಪಗಳ ವಿದ್ಯುತ್ ವೆಚ್ಚ 1 ಕೋಟಿ 56 ಲಕ್ಷ, 15 ನೇ ಹಣಕಾಸು ಅನುದಾನದಲ್ಲಿ ನೀರು ಸರಬರಾಜು ರಸ್ತೆ ಚರಂಡಿ, ಕಟ್ಟಡ ದಾರಿದೀಪ, ಸ್ಮಶಾನ ನಿರ್ವಹಣೆ ಕಾಮಗಾರಿ 86 ಲಕ್ಷ ರೂ, ನಲ್ಮ್ ಅನುದಾನದಲ್ಲಿ ಸಹಾಯಧನ ಮತ್ತು ಸಬ್ಸಿಡಿ 2 ಲಕ್ಷದ 5೦ ಸಾವಿರ ರೂ, ಕುಡಿಯುವ ನೀರಿನ ಅನುದಾನ ಕಾಮಗಾರಿಗಳು 1೦ ಲಕ್ಷ ರೂ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಲ್ಲಿ ಶೇ.24.1೦ರ ನಿಧಿಗೆ 9 ಲಕ್ಷ ರೂ, ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ರಸ್ತೆ ಚರಂಡಿ ಕಾಮಗಾರಿಗೆ 2 ಕೋಟಿ ರೂ ಹೀಗೆ ನಿರೀಕ್ಷಿತ ಖರ್ಚು ನ್ನು 11 ಕೋಟಿರೂ 16 ಲಕ್ಷ ಎಂದು ಅಂದಾಜಿಸಲಾಗಿದೆ.
ಪಂಚಾಯತ್ ಸದಸ್ಯರು ಅಧಿಕಾರಿಗಳು ಇದ್ದರು.