ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ. ಮಾ,26 ರಂದು ಬೆಳಿಗ್ಗೆ 11-00 ಕಲಶೋತ್ಸವ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ ,ಮಧ್ಯಾಹ್ನ 1.30ಕ್ಕೆ ಮಹಾಸಮಾರಾಧನೆ,ಸಾಯಂಕಾಲ ಗಂಟೆ4 ಕ್ಕೆ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರಲಾಯಿತು. ಮತ್ತು 5 ಗಂಟೆಗೆ ಮುಖತೋರಣ ಏರಿಸಲಾಯಿತು, ದೇವಳದ ಕಾರ್ಯಕ್ರಮದಲ್ಲಿ ದೇವಸ್ಥಾನ ದ ಅಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ,ರಾಜಗೋಪಾಲ್ ರಾಮಕಜೆ ದೇವತಕ್ಕರು ಮತ್ತು ಭಾಸ್ಕರ ಕೋಡಿ,ಹೊನ್ನಪ್ಪ ಕೊಳಂಗಾಯ, ಆಡಳಿತ ಕಾರ್ಯ ದರ್ಶಿ,ಸಹಕಾರ್ಯದರ್ಶಿ ನಿಡ್ಯಮಲೆ ಜೋಯಪ್ಪ, ವಿಶ್ವ ನಾಥ ಮೂಲೆ ಮಜಲು, ಪ್ರಭಾಕರ ಕೋಡಿ ,ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ ತಕ್ಕ ಮುಖ್ಯಸ್ಥರು ,ತಾ, ಪಂ ಸದಸ್ಯ ನಾಗೇಶ್ ಕಂದಲ್ಪಾಡಿ, ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಸದಸ್ಯರು ಗಳು ಹಾಗೂ ಗ್ರಾಮಸ್ಥರು ದೇವತಾಕಾರ್ಯದಲ್ಲಿ ಭಾಗವಹಿಸಿದ್ದರು.