Breaking News

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತಡ್ಕ, ಸಂಚಾಲಕರಾಗಿ ಜಾಕೆ ಸದಾನಂದ ಗೌಡ ಪುನರಾಯ್ಕೆ

 ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ 2020 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆಯಲ್ಲಿ ಫೆ.28 ರಂದು ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ವಾರ್ಷಿಕ ವರದಿ ಯನ್ನು ವಾಚಿಸಿದರು. ಬಳಿಕ ಶಾಲಾ ವಾರ್ಷಿಕ ಬಜೆಟ್ ಮತ್ತು ಆಡಿಟ್ ವರದಿಯನ್ನು ಮಂಡಿಸಲಾಯಿತು. ಸೊಸೈಟಿಯ ಬೈಲಾ ತಿದ್ದುಪಡಿಯ ಬಗ್ಗೆ ಮಂಡಿಸಲಾದ ಎಲ್ಲ ನಿರ್ಣಯಗಳನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯಲ್ಲಿ ೬೦ಕ್ಕೂ ಅಧಿಕ ಮಂದಿ ಸದಸ್ಯರು ಹಾಜರಿದ್ದು, ಶಾಲಾ ಅಭಿವೃದ್ಧಿ ಬಗ್ಗೆ ಸಲಹೆಸೂಚನೆ ನೀಡಿದರು.
ನಂತರ ೨೦೨೧ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ೧೩ಮಂದಿಯನ್ನು ಆಯ್ಕೆ ಮಾಡಲಾಗಿ, ಅಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತಡ್ಕ, ಸಂಚಾಲಕರಾಗಿ ಜಾಕೆ ಸದಾನಂದ ಗೌಡ, ಉಪಾಧ್ಯಕ್ಷರಾಗಿ ಕತ್ತಾರ್ ಇಬ್ರಾಹಿಂ, ಖಜಾಂಜಿಯಾಗಿ ಶ್ರೀನಿವಾಸ್ ಭಟ್.ಡಿ, ಜತೆಕಾರ್ಯದರ್ಶಿಯಾಗಿ ಶ್ಯಾಂಕುಮಾರ್ ಎಂ.ಎಸ್., ನಿರ್ದೇಶಕರಾಗಿ ರಾಮಚಂದ್ರ.ಎಂ, ಜಯರಾಮ ರೈ.ಕೆ, ಮೋನಪ್ಪ ಕೆ.ಎಂ., ಜಯರಾಮ ಕೆ.ಬಿ., ಮುಖ್ಯಶಿಕ್ಷಕಿ ಕುಸುಮಾವತಿ.ಯು.ಪಿ ಪುನರಾಯ್ಕೆಯಾದರು. ರಾಮಚಂದ್ರ ಕೆ.ಬಿ, ಸದಾನಂದ ಮಾವಜಿ, ಜನಾರ್ಧನ ಗೌಡ ಬರೆಮೇಲು ಇವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.