ಸುಳ್ಯ ತಾಲ್ಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಮಹಾಸಭೆ ಮತ್ತು ನೂತನ ಸಮಿತಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಯ ಮಹಾಸಭೆಯು ಸ್ತ್ರೀಶಕ್ತಿ ಭವನದಲ್ಲಿ ಮಾರ್ಚ್ 23 ರಂದು ನಡೆಯಿತು. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ರಶ್ಮಿ ರಜನಿಕಾಂತ್ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಕೆ. ಎಂ. ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿದ್ದರು. ಸಭೆಯಲ್ಲಿ ಹಿಂದಿನ ವರ್ಷದ ವರದಿಯನ್ನು ವಾಚಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ಉತ್ತಮ ಸ್ತ್ರೀ ಶಕ್ತಿ ಗುಂಪು ಆಗಿರುವ ಆದರ್ಶ ಸ್ತ್ರೀ ಶಕ್ತಿ ಗುಂಪು ಕುಂಟಿಕಾನ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಿಯುಸಿ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದ 6 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ರಶ್ಮಿ ರಜನಿಕಾಂತ್ ಉಮ್ಮಡ್ಕ, ಕಾರ್ಯದರ್ಶಿಯಾಗಿ ಹರ್ಷಿಣಿ ಕುಮಾರಿ ಕಟ್ಟೆಮನೆ, ಖಜಾಂಜಿಯಾಗಿ ರತ್ನಕುಮಾರಿ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ವೇದಾ ಶೆಟ್ಟಿ ಆಯ್ಕೆಯಾದರು. ಸದಸ್ಯರುಗಳಾಗಿ ಪ್ರಸನ್ನ ಕುಮಾರಿ, ಧರ್ಮಾವತಿ, ದೇವಕಿ, ಸರೋಜಾ, ವಿಶಾಲಾಕ್ಷಿ, ಮಮತಾ, ತೀರ್ಥಕುಮಾರಿ ಆಯ್ಕೆಯಾದರು.
ತೇಜಾವತಿ ಪ್ರಾರ್ಥಿಸಿದರು. ರತ್ನಕುಮಾರಿ ಸ್ವಾಗತಿಸಿ, ಸರೋಜಾ ವಂದಿಸಿದರು. ಹರ್ಷಿಣಿಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.