Breaking News

ವಿಜೃಂಭಣೆಯಿಂದ ನಡೆದ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಇತಿಹಾಸ ಪ್ರಸಿದ್ಧ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿಚೆನ್ನಯ ಆಗಿ ಬೈದೇರುಗಳ ನೇಮೋತ್ಸವವು ಮಾ. 27ರಂದು ನಡೆಯಿತು. ನೇಮೋತ್ಸವದ ಅಂಗವಾಗಿ ಮಾ.೨೫ರಂದು ಬೆಳಿಗ್ಗೆ ಮಹಾಗಣಪತಿ ಹವನ, ರಾತ್ರಿ ಉಳ್ಳಾಕುಳು ನೇಮ ಮತ್ತು ಕಾಜುಕುಜುಂಬ ನೇಮ, ಕೈ ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಾ.26 ರಂದು ಇಷ್ಟದೇವತೆ ನೇಮೋತ್ಸವ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ಮಾ. 27 ರಂದು ಬೆಳಿಗ್ಗೆ ನಾಗತಂಬಿಲ, ಮುಹೂರ್ತ ತೋರಣ, ಮಧ್ಯಾಹ್ನ ಎಣ್ಮೂರು ಕಟ್ಟ ಬೀಡಿನಿಂದ ಭಂಡಾರ ಬಂದು, ನೇತ್ರಾದಿ ಗರಡಿಯಲ್ಲಿ ದರ್ಶನ, ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಬೈದೆರುಗಳು ಗರಡಿ ಇಳಿದು, ರಾತ್ರಿ 2 ಗಂಟೆಗೆ ಕಿನ್ನಿದಾರು ಗರಡಿ ಇಳಿದು, ರಂಗಸ್ಥಳ ಪ್ರವೇಶ, ಮುಂಜಾನೆ 3.3೦ ಕ್ಕೆ ಕಟ್ಟಡ ಬೀಡಿಗೆ ಬೈದೆರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸಿ, ಇಂದು ಬೆಳಿಗ್ಗೆ 5 ಗಂಟೆಗೆ ರಂಗಸ್ಥಳದಲ್ಲಿ ಕೋಟಿ ಚೆನ್ನಯ್ಯ ದರ್ಶನ, ಬೆಳಿಗ್ಗೆ ಬೈದರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ ಸೇವೆ ನಡೆಯಿತು.

 2 ದಿನಗಳ ಕಾಲ ಕೂಡಾ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆದಿಬೈದೇರುಗಳ ಗರಡಿಯ ಅನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು. ಊರ, ಪರವೂರ ಸಾವಿರಾರು ಭಕ್ತಾದಿಗಳು ಆಗಮಿಸಿ, ಪ್ರಸಾದ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.