ಪ್ರಸಿದ್ಧ ಕ್ಷೇತ್ರವಾದ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರ ಶ್ರೀ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿಯವರು ಊರಿನ ಹಾಗೂ ಭಕ್ತಾಭಿಮಾನಿಗಳ ನೆರವಿನೊಂದಿಗೆ ಅಂದಾಜು 1೦ ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ್ದು, ಇದರ ಉದ್ಘಾಟನೆ ಮಾ. 28 ರಂದು ನಡೆಯಿತು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರರವರು ನೂತನ ದ್ವಾರವನ್ನು ಉದ್ಘಾಟಿಸಿ, ಶುಭಹಾರೈಸಿದರು. ಮರಕತ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಪದ್ಮನಾಭ ಪರಮಲೆ ಸಭಾಧ್ಯಕ್ಷತೆ ವಹಿಸಿದ್ದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಚಿವ ಅಂಗಾರರ ಪತ್ನಿ ಶ್ರೀಮತಿ ವೇದಾವತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗುತ್ತಿಗಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ಭಾಸ್ಕರ, ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ, ಮಾಜಿ ಸದಸ್ಯ ವೆಂಕಟರಮಣ ಕೊಚ್ಚಿ, ದೈವಗಳ ಪರಿಚಾರಕ ಕರುಣಾಕರ ಮರಕತ ಗೌರವ ಉಪಸ್ಥಿತರಿದ್ದರು. ದೇವಸ್ಥಾನದ ಹಾಲಿ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗ್ರಾ.ಪಂ. ಸದಸ್ಯರು, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮಾತ, ಉಪಾಸನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಊರಿನ ಅನೇಕ ಮಹನೀಯರು ಉಪಸ್ಥಿತರಿದ್ದರು. ವರಲಕ್ಷ್ಮಿ ಕೋಟೆ ಸ್ವಾಗತಿಸಿ, ಚಂದ್ರಕಲಾ ಉತ್ರಂಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
(ಚಿತ್ರ, ವರದಿ : ದಿನೇಶ್ ಹಾಲೆಮಜಲು )