ದಿ.ಬಾಬು ಗೌಡ ಕಡೆಂಗ ರವರ ಪ್ರಥಮ ಚಿರಸ್ಮರಣೆ – ಸಾರ್ವಜನಿಕ ಬಸ್ಸು ತಂಗುದಾಣ ಲೋಕಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಕಲ್ಲುಮುಟ್ಲು ನಿವಾಸಿ ದಿ.ಬಾಬು ಗೌಡ ಕಡೆಂಗ ರವರು ಕಳೆದ ಮಾರ್ಚ್ 31 ರಂದು ದೈವಾಧೀನರಾಗಿದ್ದು ಮೃತರ ಪ್ರಥಮ ಪುಣ್ಯಸ್ಮರಣೆಯ ಕಾರ್ಯಕ್ರಮ ಕಲ್ಲುಮುಟ್ಲು ಮನೆಯಲ್ಲಿ ಮಾ.28 ರಂದು ನಡೆಯಿತು.ಸುಳ್ಯ ಗಾಂಧಿನಗರದಲ್ಲಿ ಮಾತೃಶ್ರೀ ಫೈನಾನ್ಸ್ ಪಾಲುದಾರರಾಗಿದ್ದ ಅವರ ಜೀವನಗಾಥೆಯ ಕುರಿತು ಮಾತನಾಡಿ ರಮ್ಯ ನಡುಮನೆ ಮತ್ತು ವೆಂಕಪ್ಪ ಗೌಡ ಕಡೆಂಗ ನುಡಿನಮನ ಸಲ್ಲಿಸಿದರು. ಮೃತರ ಪತ್ನಿ ಶ್ರೀಮತಿ ಸುಗಂಧಿನಿಬಾಬು ಗೌಡ, ಪುತ್ರ ಮಿಥುನ್, ಪುತ್ರಿ ಶ್ರೀಮತಿ ಮಾನಸ ,ಸೊಸೆ,ಅಳಿಯ ಹಾಗೂ ಸಹೋದರ, ಸಹೋದರಿಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ದಿ.ಬಾಬು ಗೌಡ ಕಡೆಂಗ ಸ್ಮರಣಾರ್ಥವಾಗಿ ಅವರ ಮನೆಯವರು ನೂತನವಾಗಿ ಆಲೆಟ್ಟಿ ಮುಖ್ಯ ರಸ್ತೆಯ ಕಲ್ಲುಮುಟ್ಲು ಎಂಬಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು .ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನ.ಪಂ.ಸದಸ್ಯರಾದ ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಶ್ರೀಮತಿ ಸುಶೀಲಾ ಜಿನ್ನಪ್ಪ ಪೂಜಾರಿ, ಸ್ಥಳದಾನಿಗಳಾದ ರಾಮಕೃಷ್ಣ ಮಡಿವಾಳ, ಶ್ರೀಮತಿ ಸುಗಂಧಿನಿಬಾಬು ಗೌಡ ರವರು ದೀಪ ಬೆಳಗಿಸಿದರು. ಬಸ್ಸು ತಂಗುದಾಣವನ್ನು ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀ.ಸ.ಅಧ್ಯಕ್ಷ ಪಿ.ಬಿ.ದಿವಾಕರ ರೈ ,ಎ.ಒ.ಎಲ್.ಇ. ಕಾರ್ಯದರ್ಶಿ ಅಕ್ಷಯ್ ಕೆ.ಸಿ ಯವರು ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಎಂ.ಬಿ.ಸದಾಶಿವ, ಕೆ.ವಿ.ಹೇಮನಾಥ, ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಸುಳ್ಯ ಸಿ ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಆಲೆಟ್ಟಿ ಪಂ.ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ನಾಗಪಟ್ಟಣ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು, ಕುಶಾಲಪ್ಪ ಗೌಡ ದೇವರಗುಂಡ, ನಿವೃತ್ತ ಫಾರೆಸ್ಟರ್ ಬಾಬು ಗೌಡ ನಾಗಪಟ್ಟಣ, ಕರಿಯಪ್ಪ ಗೌಡ ಸುಳ್ಯ, ಕೆ.ಆರ್. ಪದ್ಮನಾಭ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ರತ್ನಾಕರ ಕಲ್ಲುಮುಟ್ಲು, ದಿ.ಬಾಬು ಗೌಡರವರ ಮಗ ಮಿಥುನ್ ಕಲ್ಲುಮುಟ್ಲು, ಪುತ್ರಿ ಮಾನಸ ಹಾಗೂ ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.