ಜೆಸಿಐ ಸುಳ್ಯ ಸಿಟಿಯ ವತಿಯಿಂದ ಮೌನ ಸಾಧಕ ಗೌರವಾರ್ಪಣೆ ಕಾರ್ಯಕ್ರಮ ಮಾ. ೨೮ ರಂದು ನಡೆಯಿತು. ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸಿಬ್ಬಂದಿಗಳಾದ ಗಂಭೀರ್ ನಾಯ್ಕ್ ಮತ್ತು ಚನ್ನವೀರ್ ನಾಯ್ಕ್ರವರನ್ನು ಮೌನ ಸಾಧಕ ಗೌರವಾರ್ಪಣೆ ನೀಡಿ ಗೌರವಿಸಲಾಯಿತು. ಗೌರವಾರ್ಪಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಕೊಡಪಾಲ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷ ಚಂದ್ರಶೇಖರ ಕನಕಮಜಲು ವಹಿಸಿದ್ದರು. ನಿಕಟಪೂರ್ವಾದ್ಯಕ್ಷ ವಿನಯರಾಜ್ ಮಡ್ತಿಲ, ಸ್ಥಾಪಕರಾದ ಮನಮೋಹನ್ ಬಳ್ಳಡ್ಕ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಜೆಸಿಐ ಸುಳ್ಯ ಸಿಟಿಯ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.