ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ಕೊಡಗು ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಪ್ರದರ್ಶನ ನೀಡಿದ್ದು,ಹಲವು ಮೇಲಾಟಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಹುಡುಗಿಯರ ವಿಭಾಗದಲ್ಲಿ ಸುಷ್ಮಾ ಡಿ.ಎಸ್.100ಮೀ,200ಮೀ ಓಟ ದ್ವಿತೀಯ,ವನಿತಾ ಪ್ರಿಯಾ ಡಿಸೋಜ(ಹ್ಯಾಮರ್ ತ್ರೋ ಪ್ರಥಮ),ಲತಾ ಸಿ.ಪಿ.(ಡಿಸ್ಕಸ್ ತ್ರೋ ದ್ವಿತೀಯ) ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.ಹಾಗೂ ಹುಡುಗರ ವಿಭಾಗದಲ್ಲಿ ಇರ್ಪಾನ್ ಎಸ್.ಇ.(ಹ್ಯಾಮರ್ ತ್ರೋ ಪ್ರಥಮ),ಶಶಾಂಕ್ ಪಿ.ವಿ.(ವಾಕ್ ರೇಸ್
ದ್ವಿತೀಯ),ಗಗನ್.ಎಂ.ಸಿ(ಹೈಜಂಪ್ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಕುಶಾಲಪ್ಪ ಮಾರ್ಗದರ್ಶನ ನೀಡಿರುತ್ತಾರೆ.