Breaking News

ಸಾವಿರಾರು ಜನರು ನಡೆದಾಡುವ ರಸ್ತೆಗೆ ಗುದ್ದಲಿ ಪೂಜೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

11 ಲಕ್ಷ ರೂ. ವೆಚ್ಚದಲ್ಲಿ ಸುಳ್ಯ ಜೂನಿಯರ್ ಕಾಲೇಜು ರಸ್ತೆ ಅಭಿವೃದ್ಧಿ

 

ಪ್ರತಿ ದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ಬಹುಬೇಡಿಕೆಯ ಸುಳ್ಯ ಜೂನಿಯರ್ ಕಾಲೇಜು ರಸ್ತೆ ಅಭಿವೃದ್ಧಿಗೆ ಇಂದು ಗುದ್ದಲಿಪೂಜೆ ನೆರವೇರಿತು. ಎಸ್‌ಎಫ್‌ಸಿ ಯೋಜನೆಯ 11 ಲಕ್ಷ ರೂ. ವೆಚ್ಚದಲ್ಲಿ 150 ಮೀಟರ್ ಉದ್ದಕ್ಕೆ ಈ ರಸ್ತೆ ಕಾಂಕ್ರಿಟೀಕರಣಗೊಳ್ಳಲಿದೆ. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಗುದ್ದಲಿಪೂಜೆ ನೆರವೇರಿಸಿದರು. ವಾರ್ಡ್ ಸದಸ್ಯರುಗಳಾದ ಡೇವಿಡ್ ಧೀರಾ ಕ್ರಾಸ್ತಾ, ಕಿಶೋರಿ ಶೇಟ್, ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ, ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಪೂಜಿತಾ ಕೆ.ಎ., ಬಾಲಕೃಷ್ಣ ಭಟ್ ಕೊಡೆಂಕಿರಿ, ಶೀಲಾ ಕುರುಂಜಿ, ಪ್ರವಿತಾ ಪ್ರಶಾಂತ್, ಜೂನಿಯರ್ ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ರಸ್ತೆಯ ಫಲಾನುಭವಿಗಳಾದ ಕೆ.ಆರ್.ಮನಮೋಹನ್, ಮುರಳಿ ಮಾವಂಜಿ, ಸತೀಶ್ ಶ್ರೀದೇವಿ, ರಾಮಕೃಷ್ಣ, ನ.ಪಂ. ಮಾಜಿ ಸದಸ್ಯ ಗಿರೀಶ್ ಕಲ್ಲಗದ್ದೆ, ಶಿಕ್ಷಕ ನಟರಾಜ್ ಎಂ.ಎಸ್., ಐ.ಬಿ.ಚಂದ್ರಶೇಖರ್, ನ.ಪಂ. ಇಂಜಿನಿಯರ್ ಶಿವಕುಮಾರ್, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಪ್ರಶಾಂತ್ ಕಾಯರ್ತೋಡಿ, ನ.ಪಂ. ಸಿಬ್ಬಂದಿ ಶಶಿಕಲಾ ಮಯ್ಯ, ನಾರಾಯಣ ಶಾಂತಿನಗರ, ಗುರುದತ್ ಶೇಟ್, ಕಂಟ್ರಾಕ್ಟರ್ ಮೂರ್ತಿ ಇದ್ದರು.

ರಸ್ತೆ ಅಗಲೀಕರಿಸೋಣ ಸಹಕಾರ ನೀಡಿ : ನ.ಪಂ. ಅಧ್ಯಕ್ಷ ಮನವಿ
ಗುದ್ದಲಿಪೂಜೆ ನೆರವೇರಿಸಿದ ನ.ಪಂ. ಅಧ್ಯಕ್ಷ ವಿನಯ ಕಂದಡ್ಕರವರು ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷದಿಂದ ಬೇಡಿಕೆ ಇದೆ. ಈ ಬಾರಿ ೧೧ ಲಕ್ಷ ರೂ. ವೆಚ್ಚದಲ್ಲಿ ೧೫೦ ಮೀಟರ್ ಹಾಗೂ ಶಾಸಕರ ವಿಏಷ ಅನುದಾನ ೨೦ ಲಕ್ಷ ರೂ. ವೆಚ್ಚದಲ್ಲಿ ೧೯೦ ಮೀಟರ್ ಅಭಿವೃದ್ಧಿಗೊಳ್ಳಲಿದೆ. ರಸ್ತೆ ವ್ಯವಸ್ಥಿತವಾಗಿ ಎರಡು ವಾಹನ ಚಲಾಯಿಸಬೇಕಾದೆ ಕನಿಷ್ಟ ಮೂರು ಮುಕ್ಕಾಲು ಮೀಟರ್ ಅಗಲ ಬೇಕಾಗುತ್ತದೆ. ಆದರೆ ಇಲ್ಲಿ ಅಷ್ಟು ಜಾಗ ಇಲ್ಲ. ಮೂರು ಮೀಟರ್ ಸಿಗಬಹುದಷ್ಟೆ. ಈ ಭಾಗದ ಜನರು ರಸ್ತೆಗೆ ಅಗತ್ಯವಿದಷ್ಟು ಜಾಗ ನೀಡಿದರೆ ವ್ಯವಸ್ಥಿತವಾಗಿ ರಸ್ತೆ ನಿರ್ಮಿಸೋಣ. ನ.ಪಂ.ನೊಡನೆ ಸಹಕರಿಸಿ ಎಂದು ಹೇಳಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.