ಇತ್ತೀಚೆಗೆ ನಿಧನರಾದ ತಂಗಮ್ಮ ಟೀಚರ್ ದೋಳರವರ ಶ್ರದ್ದಾಂಜಲಿ ಸಭೆಯು ಇಂದು ಮರ್ಕಂಜದ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.
ಅಡ್ತಲೆ ಹೊನ್ನಪ್ಪ ಮಾಸ್ತರ್ ರವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತಿ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ದೋಳ, ಪುತ್ರ ರಾದ ರಾಜಶೇಖರ್ ದೋಳ, ಕೃಷ್ಣಪ್ರಸಾದ್ ದೋಳ, ಪುತ್ರಿ ಶ್ರೀಮತಿ ಚಂದ್ರಪ್ರಭಾ ದಯಾನಂದ, ಸೊಸೆಯಂದಿರು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.