ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಇಂದು ನಡೆಯುತ್ತಿದೆ. ಪೂರ್ವಾಹ್ನ ಗಣಪತಿ ಹೋಮ, ಪಂಚವಶಂತಿ ಕಲಶಾಭಿಷೇಕ, ಏಕರುದ್ರಾಭಿಷೇಕ, ನಾಗ ದೇವರಿಗೆ ಮತ್ತು ದೈವಗಳಿಗೆ ತಂಬಿಲ ನಡೆಯಿತು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30ಕ್ಕೆ ಶ್ರೀ ದೇವರಿಗೆ ರಂಗಪೂಜೆ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ನಡೆಯಲಿದೆ. ಸಂಜೆ 5.00 ಗಂಟೆಯಿಂದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.