Breaking News

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ಉದಯಕುಮಾರ್ ಕೆ. ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ಉದಯಕುಮಾರ್ ಕೆ. ಮಾ.೩೧ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ೧೯೮೪ರಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯಕ್ಕೆ ಸೇರಿರುವ ಇವರು ೩೭ ವರ್ಷಗಳ ಸೇವೆಗಳ ಬಳಿಕ ಮಾ.೩೧ ರಂದು ಪಾಂಶುಪಾಲರ ಹುದ್ದೆಯಿಂದ ಸೇವಾ ನಿವೃತ್ತಿ ಹೊಂದಲಿದ್ದಾರೆ. ಪುತ್ತೂರು ಬೊಳ್ವಾರ್‌ನಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು, ಪಿ.ಯು ಶಿಕ್ಷಣವನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪಡೆದು ಬಿಬಿಎ ಶಿಕ್ಷಣವನ್ನು ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ. ೧೯೮೩ ರಲ್ಲಿ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಸೇವೆ ಆರಂಭಿಸಿ ೧೯೮೪ ರಲ್ಲಿ ಕೆ.ಎಸ್.ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ್ದಾರೆ. ವೆಂಕಟೇಶ್ವರ ಯುನಿವರ್ಸಿಟಿ ತಿರುಪತಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ , ಉಪಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿ, ೨೦೧೯ ರಲ್ಲಿ ಪ್ರಾಂಶುಪಾಲರಾಗಿ ಕೆಲಸ ಆರಂಭಿಸಿದ್ದಾರೆ. ಬೋರ್ಡ್ ಆಫ್ ಎಕ್ಸಾಮಿನೇಶನ್ ಕಮಿಟಿ ಸದಸ್ಯರಾಗಿ, ಯುನಿವರ್ಸಿಟಿಯ ಅಮುಕ್ತ್ ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಮೂಲತಹ ಪುತ್ತೂರಿನ ಬೊಳ್ವಾರ್ ನವರಾಗಿರುವ ಇವರು ದಿ.ಸುಂದರ ರಾವ್ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರ. ಪತ್ನಿ ಪ್ರತಿಭಾ ಉದಯಕುಮಾರ್. ಮಗಳು ಶ್ರೀಮತಿ ಅನ್ವಿತಾ ಸೂರ್ಯನಾರಾಯಣ ಎಚ್ ಸಿ ಎಲ್ ಟೆಕ್ನಾಲಜಿ ಚೆನೈ ಇಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಮಗ ಅಂಕಿತ್ ಜರ್ಮನಿಯಲ್ಲಿ ಎಂ ಎಸ್ ಮಾಡುತ್ತಿದ್ದಾರೆ. ಪ್ರಸ್ತುತ ಸುಬ್ರಹ್ಮಣ್ಯದ ವಿದ್ಯಾನಗರದಲ್ಲಿ ವಾಸವಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.