ಮಾರ್ಚ್ ತಿಂಗಳ ವಿಜೇತರ ಆಯ್ಕೆ
ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ 25 ವರ್ಷ ಪೂರ್ತಿಗೊಳಿಸಿ ರಜತ ಸಂಭ್ರಮದಲ್ಲಿದ್ದು,ಗ್ರಾಹಕರಿಗೆ ವರ್ಷಪೂರ್ತಿ ಬಹುಮಾನ ನೀಡಲು ನಿರ್ಧರಿಸಿದ್ದು, ಪ್ರತಿ ತಿಂಗಳು ಇಬ್ಬರು ಗ್ರಾಹಕರನ್ನು ಆಯ್ಕೆ ಮಾಡಿ ಅವರಿಗೆ ತಲಾ ಹದಿನೈದು ಸಾವಿರ ಮತ್ತು ಹತ್ತು ಸಾವಿರದ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತಿದೆ.
ಈ ಯೋಜನೆಯ ಮಾರ್ಚ್ ತಿಂಗಳ ಡ್ರಾ ಮಾ.31ರಂದು ನಡೆಯಿತು.
ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿಧಿ ದೇಂಗೋಡಿ ಮತ್ತು ಕೃಷಿಕರಾದ ಕುಶಾಲಪ್ಪ ಗೌಡ ಕುಕ್ಕೇಟಿ ವಿಜೇತರ ಆಯ್ಕೆಯನ್ನು ನಡೆಸಿಕೊಟ್ಟರು.
ಪ್ರಥಮ ವಿಜೇತರಾಗಿ ಭಾಸ್ಕರ ಏನೆಕಲ್ಲು ಹಾಗೂ ದ್ವಿತೀಯ ವಿಜೇತರಾಗಿ ಶಶಿಕಲಾ ಗೌಡರಮನೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.