ಜಿಲ್ಲಾಧಿಕಾರಿ ಗಳ ಆದೇಶದಿಂದ ನಡೆಯಲಿಲ್ಲ ಸೌಹಾರ್ದ ಸಮಾರಂಭ ಹಾಗೂ ಸಮಾರೋಪ
ಸಾಂಕೇತಿಕವಾಗಿ ಪ್ರಾರ್ಥನೆಯೊಂದಿಗೆ ಅನ್ನದಾನ ವಿವರಣೆಯೊಂದಿಗೆ ಮುಕ್ತಾಯ ಗೊಂಡ ಉರೂಸ್
ಅಜ್ಜಾವರ-ಮೇನಾಲ ಮಖಾಂ ಉರೂಸ್ಉರೂಸ್ ಕಾರ್ಯಕ್ರಮವು ಮಾ.26 ಮತ್ತು 27 ರಂದು ಅಜ್ಜಾವರ ಜುಮಾ ಮಸೀದಿ ವಠಾರದಲ್ಲಿ ಹಾಗೂ 28, 29, 30 ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಿತು. ಮಾ.26 ರಂದು ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮ ವನ್ನು ಶೈಖುನಾ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾಶಿರ್ವಚನ ನೀಡಿ ಉದ್ಘಾಟಿಸಿದರು. ಮಾ.27 ರಂದು ರಾತ್ರಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದಲ್ಲಿ ನಮ್ಮ ಪ್ರಯಾಣವು ಅಲ್ಲಾಹನಡೆಗೆ ಎಂಬ ವಿಷಯದ ಬಗ್ಗೆ ಜಾಫರ್ ಸ್ವಾದಿಕ್ ದಾರಿಮಿ ಪೊನ್ಮಲ ಉಪನ್ಯಾಸ ನೀಡಿದರು.
ಮಾ.28 ರಂದು ರಾತ್ರಿ ಮೇನಾಲ ದರ್ಗಾ ಶರೀಫಿನಲ್ಲಿ ಮಖಾಂ ಅಲಂಕಾರ ಮತ್ತು ದಿಕ್ರ್ ಹಲ್ಕ ನಡೆಯಿತು. ಕಾರ್ಯಕ್ರಮ ದ ನೇತೃತ್ವವನ್ನು ಸಯ್ಯದ್ ಹಕೀಂ ತಂಙಳ್ ಆದೂರು ವಹಿಸಿದ್ದರು. ರಾತ್ರಿ ನಡೆದ ಸಭಾ ಕಾರ್ಯಕ್ರಮ ದ ಉದ್ಘಾಟನೆಯನ್ನು ಜಾಫರ್ ಸ್ವಾದಿಕ್ ದಾರಿಮಿ ಪೊನ್ಮಲ ನೆರವೇರಿಸಿದರು. ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು ಕೇರಳ ಉಪನ್ಯಾಸ ನೀಡಿದರು. ಮಾ.29 ರಂದು ರಾತ್ರಿ ನಡೆದ ಮತ ಪ್ರಭಾಷಣ ಕಾರ್ಯಕ್ರಮ ದಲ್ಲಿ ಯು.ಕೆ. ಮುಹಮ್ಮದ್ ನಿಝಾಮಿ ಮೊಗ್ರಾಲ್ ಕುಟುಂಬ ಜೀವನ ಇಸ್ಲಾಮಿನಲ್ಲಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ನಡೆಯದ ಸೌಹಾರ್ದ ಸಮಾರಂಭ :
ಮಾ.30 ರಂದು ನಡೆಯುವ ಸಮಾರೋಪ ಕಾರ್ಯಕ್ರಮ ದಿನ ಸಂಜೆ ಸೌಹಾರ್ದ ಸಂಗಮ,ರಾತ್ರಿ ಸಮಾರೋಪ ಸಮಾರಂಭ ನಡೆಯಬೇಕಿತ್ತು. ಜಿಲ್ಲಾಧಿಕಾರಿ ಆದೇಶದಂತೆ ಹೆಚ್ಚಿನ ಜನ ಸೇರಿಸಿ ಸಾರ್ವಜನಿಕ ಸಮಾರಂಭ ನಡೆಸಲು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಸಭೆ ಸಮಾರಂಭ ನಡೆಸದೆ ಝೈನುಲ್ ಅಬಿದಿನ್ ತಂಙಳ್ ದುಗಲಡ್ಕ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮವನ್ನು ಅನ್ನದಾನ ನೀಡಿ ಮುಗಿಸಲಾಯಿತು.
ಕೋವಿಡ್ ನಿಯಮ ಪಾಲಿಸುವ ನಿಟ್ಟಿನಲ್ಲಿ ಝಿಯಾರತ್ ಹಾಗೂ ಹರಕೆ ತಲುಪಿಸಲು ಹಗಲು ಹೊತ್ತಿನಲ್ಲಿ ಅವಕಾಶ ನೀಡಲಾಗಿತು. ಮಾಹಿತಿ ತಿಳಿಯದೆ ಅನ್ನದಾನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸಿದ್ದರು.
ಸಮಾರೋಪ ಸಮಾರಂಭದ ಝಿಯಾರತ್ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎ.ಪಿ. ಅಬ್ದುಲ್ಲ ಕುಂಞಿ ಹಾಜಿ ಪಳ್ಳಿಕ್ಕರೆ,ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ವರ್ಕಿಂಗ್ ಕನ್ವಿನರಲ್ ರಫೀಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.