ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿದ್ದ ಶ್ರೀಮತಿ ಸೀತಮ್ಮ ಪಿ. ಪಾರೆಪ್ಪಾಡಿ ಮಾ.31ರಂದು ನಿವೃತ್ತಿ ಹೊಂದಿದರು. ಇವರು 1988ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಉಪಕೇಂದ್ರ ದೇವಚಳ್ಳ, ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಹರಿಹರ,1998ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಉಪಕೇಂದ್ರ ನೆಲ್ಲೂರು ಕೆಮ್ರಾಜೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 33 ವರ್ಷಗಳಿಂದ ಇವರು ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಸುಬ್ರಹ್ಮಣ್ಯ ಪಾರೆಪ್ಪಾಡಿಯವರ ಪತ್ನಿ. ಪುತ್ರಿ ಶ್ರೀಮತಿ ತಪಸ್ವಿನಿ ವಿನ್ಯಾಸ್ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಳಿಯ ವಿನ್ಯಾಸ್ ಪುಂಡಿಗದ್ದೆ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಶ್ರೀಕಾಂತ್ ಪಾರೆಪ್ಪಾಡಿ ಪುತ್ತೂರಿನ ಮಾಹಿ ಹೆಚ್.ಆರ್. ಸೊಲ್ಯೂಷನ್ಸ್ ಸರ್ವಿಸ್ ನಡೆಸುತ್ತಿದ್ದಾರೆ.