ಸಂಪಾಜೆ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳ ವತಿಯಿಂದ ಗೂನಡ್ಕ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಪಿ.ಲೋಕನಾಥರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇಂದು ನಡೆಯಿತು.
ಎಸ್.ಪಿ.ಲೋಕನಾಥ- ಯಶೋದ ದಂಪತಿಗಳನ್ನು ಹಾರ ಹಾಕಿ,ಫಲಪುಷ್ಪ,ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯರು,ಬಂಧುಗಳು, ಮಿತ್ರರು,ಹಿತೈಷಿಗಳು ಉಪಸ್ಥಿತರಿದ್ದರು.