ಸುಮಾರು 41 ವರ್ಷಗಳ ಕಾಲ ಗೂನಡ್ಕ ಅಂಚೆಪಾಲಕರಾಗಿ ಸೇವೆ ಸಲ್ಲಿಸಿ ಮಾ.31 ರಂದು ನಿವೃತ್ತಿಗೊಂಡಿರುವ ಹಾಗೂ ಶ್ರೀ ಶಾರದಾ ಅನುದಾನಿತ ಶಾಲೆ ಗೂನಡ್ಕ ಇಲ್ಲಿ ಸುಮಾರು ೨೦ ವರ್ಷದಿಂದ ಸಂಚಾಲಕರಾಗಿ ಸೇವೆಗೈಯ್ಯುತ್ತಿರುವ ಎಸ್.ಪಿ.ಲೋಕನಾಥ್ರವರಿಗೆ ವಿದಾಯ ಸಮಾರಂಭವು ಎ.1ರಂದು ಗೂನಡ್ಕದ ಶ್ರೀ ಶಾರದಾ ಅನುದಾನಿತ ಶಾಲೆಯಲ್ಲಿ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಎನ್ನೆಂಪಿಯು ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಎಸ್.ಪಿ.ಲೋಕನಾಥ್ ಹಾಗೂ ಯಶೋದಾ ಲೋಕನಾಥ್ ದಂಪತಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಗುರುಗಳಾದ ಚಿದಾನಂದ ಯು.ಎಸ್., ಗಣಪತಿ ಭಟ್, ಕೆ.ಪಿ.ಜಗದೀಶ್, ಪಿ.ಎ. ಅಬ್ದುಲ್ಲ, ಯು.ಬಿ.ಚಕ್ರಪಾಣಿ, ದಯಾನಂದ, ವೀಣಾ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು, ಊರವರು ಉಪಸ್ಥಿತರಿದ್ದರು.