ಸುಬ್ರಹ್ಮಣ್ಯ ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಸಭೆಯಲ್ಲಿ ಮಾಸ್ಕ್ ತಯಾರಿಕ ಕಾರ್ಯಕ್ರಮ ಮಾ.31 ರಂದು ನಡೆಯಿತು.
ಗ್ರಾ. ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸುಜಾತ ಗಣೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು . ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯಾದ ಮುತ್ತಪ್ಪ ದವಳಗಿ, ಉಪಾಧ್ಯಕ್ಷರಾದ ಸವಿತಭಟ್, ಗ್ರಾ.ಪಂ. ಸದಸ್ಯೆಯಾದ ಭಾರತಿ ದಿನೇಶ್, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ ಏನೆಕಲ್, ಗ್ರಾ. ಪಂ ಸದಸ್ಯರು ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರಿಣಿ ಕಲ್ಲಾಜೆ ಪ್ರಾರ್ಥಿಸಿ, ಎಂ ಬಿ ಕೆ ಹೇಮಾವತಿ ಸ್ವಾಗತಿಸಿ, ಕವಿತ ವಂದಿಸಿದರು, ಎಲ್ ಸಿ ಆರ್ ಪಿ ರತ್ನಕುಮಾರಿ ಕಾರ್ಯಕ್ರಮ ನಿರೂಪಿಸಿದರು.