ಸುಬ್ರಹ್ಮಣ್ಯದ ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಭೆ ಮಾ.17 ರಂದು ಗ್ರಾ.ಪಂ.ನ ರಾಜೀವಗಾಂಧಿ ಸಭಾ ಭವನದಲ್ಲಿ ನಡೆಯಿತು.
ಸಂಜೀವಿನಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಶೋಬಾನಲ್ಲೂರಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ದವಳಗಿ ಯವರು ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಜಾತ ಗಣೇಶ್, ಕಾರ್ಯದರ್ಶಿಯಾಗಿ ಮೀನಾಕ್ಷಿ ಏನೆಕಲ್, ಉಪಾಧ್ಯಕ್ಷರಾಗಿ ರಮಣಿ ಏನೆಕಲ್, ಜತೆಕಾರ್ಯದರ್ಶಿಯಾಗಿ, ಸುಜಾತ ಕಲ್ಲಾಜೆ, ಖಜಾಂಜಿಯಾಗಿ ಭುವನೇಶ್ವರಿಪ್ರಸಾದ್, ಮತ್ತು ಉಪಸಮಿತಿಸದಸ್ಯರಾಗಿ, ಕವಿತಾ ಬಾನಡ್ಕ, ಪುಷ್ಪಕೃಷ್ಣ, ಹರಿಣಾಕ್ಷಿ ಕಲ್ಲಾಜೆ, ಹರಿಣಾಕ್ಷಿ ನೂಚಿಲ, ವನಿತ ದೇವರಗದ್ದೆ , ಸೌಮ್ಯ, ತ್ರಿವೇಣಿದಾಮ್ಲೆ ಇರಲಿದ್ದಾರೆ. ಒಕ್ಕೂಟದ ಎಂ ಬಿ ಕೆ ಹೇಮಾವತಿ, ಎಲ್ ಸಿ ಆರ್ ಪಿ ಆದ ರತ್ನಕುಮಾರಿ ಮತ್ತು ಕವಿತಾ ರವರು ಹಾಗೂ ಪಂಚಾಯತ್ ಉಪಾಧ್ಯಕ್ಷೆ ಸವಿತಾ ಭಟ್, ಸದಸ್ಯೆ ಭಾರತಿ ದಿನೇಶ್, ಉಪಸ್ಥಿತರಿದ್ದರು. ರತ್ನಕುಮಾರಿ ಸ್ವಾಗತಿಸಿ, ಕವಿತಾ ವಂದಿಸಿದರು.