Breaking News

ಏ. 8- 9ರಂದು ಕುಂಜಾಡಿ ತರವಾಡು ಮನೆಯ ಧರ್ಮ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅರುವತ್ತು ವರುಷಗಳಿಂದ ನಿಂತು ಹೋಗಿದ್ದ ಕೆಳಗಿನ ಕುಂಜಾಡಿ ತರವಾಡು‌ ಮನೆಯ ಧರ್ಮ ‌ನೇಮೋತ್ಸವವು ಏಪ್ರಿಲ್ 8, 9ರ ದಿನಗಳಲ್ಲಿ ನಡೆಯುವುದು.

ಬಂಬಿಲಗುತ್ತು ಮೇಗಿನ ಕುಂಜಾಡಿ ಮತ್ತು ಕೆಳಗಿನ ಕುಂಜಾಡಿ ಮಧ್ಯಸ್ಥರ ಮುಂದಾಳತ್ವದಲ್ಲಿ ಈ ಧರ್ಮ ನೇಮೋತ್ಸವ ನಡೆಯುತ್ತವೆ. ಕೊರೋನಾ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಟ್ಟು ನಾಲ್ಕು ದಿನಗಳ ಬದಲು ಎರಡು ‌ದಿನಗಳ ನೇಮೋತ್ಸವ ಮಾತ್ರ ‌ನಡೆಸುತ್ತಿದ್ದೇವೆ. ರಕ್ತೇಶ್ವರಿ, ಪಿಲಿಚಾಮುಂಡಿ ಸಹಿತ 13 ಪರಿವಾರ ದೈವಗಳ ನೇಮೋತ್ಸವ ದೈವ ನಿಯಮದಂತೆ ನಡೆಯುವುದಾಗಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವಿಭಕ್ತ ಕುಟುಂಬ ಒಡೆದು ಹೋದುದರಿಂದ 60 ವರುಷಗಳಿಂದ ಧರ್ಮ ನೇಮೋತ್ಸವ ನಡೆದಿಲ್ಲ. ಕ್ರಮವೆಂದರೆ 12 ವರ್ಷಕ್ಕೊಮ್ಮೆ ನಡೆಯಬೇಕು. ಮೊದಲಿಗೆ ನಿಶ್ಚಿತವಾಗಿತ್ತು. ಈಗ ಕೊರೋನಾ ಕಾರಣ ಲಸಿಕೆ ನೀಡುವ ತನಕದ‌ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ನೇಮೋತ್ಸವ ನಡೆಸುತ್ತಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ‌ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದ. ಕ. ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ರವಿಶಂಕರ್ ಮಿಜಾರ್, ಕಸ್ತೂರಿ ಪಂಜ ಮೊದಲಾದವರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.