ಎಣ್ಮೂರು ಕ್ಲಸ್ಟರ್ ಗೊಳಪಟ್ಟ ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಪೌಷ್ಟಿಕ ವನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಪ್ರಶಸ್ತಿ ಲಭಿಸಿದೆ.
ಮಾ. 31ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಉಪನಿರ್ದೇಶಕ ಮಲ್ಲೇಸ್ವಾಮಿರವರು ಪ್ರಶಸ್ತಿ ಮತ್ತು ಫಲಕ ನೀಡಿ ಗೌರವಿಸಿದರು. ಮುರುಳ್ಯ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ರೈ ಮತ್ತು ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಧು ಪಿ. ಆರ್. ಪ್ರಶಸ್ತಿ ಮತ್ತು ಫಲಕವನ್ನು ಸ್ವೀಕರಿಸಿದರು.
ಮುರುಳ್ಯ ಶಾಲೆಯಲ್ಲಿ ವಿವಿಧ ನಮೂನೆಯ ಔಷಧೀಯ ಗುಣಗಳುಳ್ಳ ಗಿಡಗಳು ಕಬ್ಬು, ನೆಲ್ಲಿಕಾಯಿ, ನೇರಳೆ ಮರ, ತೆಂಗಿನ ಮರಗಳು, ನೇರಳೆಮರ, ಸಪೋಟ ಮರಗಳು, ಪಪ್ಪಾಯಿ ಮರಗಳು, ಬಾಳೆ ಗಿಡಗಳು, ಗೇರು ಮರಗಳು ಅಲ್ಲದೆ, ಬಣ್ಣಬಣ್ಣದ ಕ್ರೋಟನ್ ಗಿಡಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.
ಇಲ್ಲಿಯ ಎಸ್ ಡಿಎಂಸಿ ಪದಾಧಿಕಾರಿಗಳು, ಶಿಕ್ಷಕವೃಂದದವರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಪೋಷಕರು ಶಾಲೆಯ ಬಗ್ಗೆ ಮುತುವರ್ಜಿ ವಹಿಸಿ ನಿರ್ವಹಣೆ ಮಾಡುತ್ತಿದ್ದಾರೆ.