ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಹಾಗೂ ಸಂಶೋಧನಾ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಶ್ರೀಮತಿ ಸುರೇಖಾ ಎಂ. ರವರ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿ.ಟಿ.ಯು ಮಂಗಳೂರು ವಿಭಾಗದ ವಿಶೇಷಾಧಿಕಾರಿ, ಡಾ. ಶಿವಕುಮಾರ್ ಹೊಸೊಳಿಕೆರವರ ಮಾರ್ಗದರ್ಶನದಲ್ಲಿ ” Studies on Effect of Dielectric Constant on electrical conductivity and acoustic behavior of a few industrially important electrolytes in 2 ethoxy ethanol + water mixtures ” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ಶ್ರೀಮತಿ ಸುರೇಖಾರವರು ದಿ. ಆತ್ಮರಾಮ ಮೋಂಟಡ್ಕ ಮತ್ತು ಶ್ರೀಮತಿ ರತ್ನಾವತಿ ಮೋಂಟಡ್ಕರವರ ಪುತ್ರಿ. ಸುಳ್ಯ ಕಾಂತಮಂಗಲ ನಿವಾಸಿಯಾಗಿರುವ ಇವರು ಯಶವಂತ ದೋಲ್ಪಾಡಿಯವರ ಪತ್ನಿ. ಶ್ರೀಮತಿ ಸುರೇಖಾರವರು ಸುಮಾರು 18 ವರ್ಷಗಳಿಂದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏ.೩ರಂದು ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.