ಅಜ್ಜಾವರ ಗ್ರಾಮದ ಅಡ್ಪಂಗಾಯ ಹೊನ್ನಪ್ಪ ಗೌಡ ಎಂಬವರ ಶೌಚಾಲಯದಲ್ಲಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅರಂಬೂರಿನ ಮೋಹನ ಎಂಬವರು ಹಿಡಿದು, ಬೇಂಗಮಲೆ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆಯ ವೇಳೆಗೆ ಸ್ಥಾನಕ್ಕೆಂದು ಹೋಗುವ ವೇಳೆ ಶೌಚಾಲಯದಲ್ಲಿ ಕಾಳಿಂಗ ಸರ್ಪ ಇರುವುದು ಗೊತ್ತಾಗಿತ್ತು.