ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಸುಳ್ಯ ಇದರ 25 ನೇ ವಾರ್ಷಿಕ ಮಹಾಸಭೆ ಎ.2 ರಂದು ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ನೀಡಿದರು.
ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ.ಎಂ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು.ಅನ್ಸಾರಿಯ ಜುಮ್ಮಾ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್,
ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಎಸ್ ಆದಂ ಕುಂಞಿ ಕಮ್ಮಾಡಿ, ಅನ್ಸಾರಿಯ ಸಲಹಾ ಸಮಿತಿ ಸದಸ್ಯರಾದ ಹಸನುಲ್ ಪೈಝಿ ಮಾಂಬ್ಳಿ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಹಾಜಿ ಅಬ್ದುಲ್ ಶುಕೂರ್,ಅನ್ಸಾರಿಯ ಯ ಎ ಇ ಸಮಿತಿ ಕೋಶಾಧಿಕಾರಿ ವಿ.ಕೆ ಮಹಮ್ಮದ್ ಮುನೀರ್ ಜಟ್ಟಿಪಳ್ಳ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್, ಎಜಿಸಿಸಿ ಹಾಜಿ ಎಸ್ ಎಂ ಅಬ್ದುಲ್ ಹಮೀದ್, ಸುನ್ನಿ ಮದರಸ ಮ್ಯಾನೇಜ್ಮೆಂಟ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಮುಸ್ತಫಾ ಕೆ.ಎಂ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕ ಅಬ್ದುಲ್ಲಾ ಮಾಸ್ಟರ್ ಅರಂತೋಡು,ಅನ್ಸಾರಿಯ ಶಾದಿಮಹಲ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಪಟೇಲ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ನ ವಿದ್ಯಾರ್ಥಿ ಮುಝಮೀಲ್ ಕಿರಾಅತ್ ಪಠಿಸಿದರು.ಕಾರ್ಯದರ್ಶಿ ಎಸ್ ಎಂ ಹನೀಫ್ ಬುಶ್ರಾ ಸ್ವಾಗತಿಸಿದರು.
ಕಾರ್ಯದರ್ಶಿ ಕೆ.ಎ ಅಬ್ದುಲ್ ಕಲಾಂ ಬೀಜಕೊಚ್ಚಿ ವಾರ್ಷಿಕ ವರದಿ ವಾಚಿಸಿದರು.
ಲೆಕ್ಕಪತ್ರ ವನ್ನು ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮಂಡಿಸಿದರು.
2021_22 ಸಾಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಬಿಟಿಗೆ ಕಾರ್ಯದರ್ಶಿ ಶರೀಫ್ ಕಾರ್ಯಕ್ರಮ ನಿರೂಪಿಸಿದರು.