ಅಮರಮುಡ್ನೂರು ಗ್ರಾಮದ ಪೈಲಾರು ಎಂಬಲ್ಲಿ ಸುಮಾರು 20 ವರ್ಷದ ಹಿಂದೆ ಕೊರೆದ ಕೊಳವೆ ಬಾವಿಗೆ ಬೋರ್ ವೆಲ್ ಅಳವಡಿಸಲಾಗಿತ್ತು. ತದ ನಂತರ ಕ್ರಮೇಣ ಬೋರ್ ವೆಲ್ ಕೆಟ್ಟು ನೀರು ಬಾರದೆ ನಿರುಪಯುಕ್ತವಾಗಿತ್ತು. ಕಳೆದ ಕೆಲ ದಿನದ ಹಿಂದೆ ಪೈಲಾರಿನ ಬಸ್ ತಂಗುದಾಣದ ವಠಾರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಯಿತು. ಆದರೆ ನೀರಿನ ಸಮಸ್ಯೆ ಇದ್ದುದರಿಂದ ಕೊಳವೆ ಬಾವಿಗೆ ಅಳವಡಿಸಿದ ಬೋರ್ ವೆಲ್ ನ್ನು ದುರಸ್ತಿಪಡಿಸುವ ಕಾರ್ಯಕ್ಕೆ ಈ ವಾರ್ಡಿನ ಪಂಚಾಯತ್ ಸದಸ್ಯ ಕೃಷ್ಣ ಪ್ರಸಾದ್ ಮಾಡಬಾಕಿಲ ಮುತುವರ್ಜಿ ವಹಿಸಿ ನಿರ್ವಹಿಸಿದರು. ಇದೀಗ ದುರಸ್ತಿಪಡಿಸಿದ ಬೋರ್ ವೆಲ್ ನಲ್ಲಿ ನೀರು ಬರುತ್ತಿದ್ದು ಸಾರ್ವಜನಿಕರಿಗೆ ಸದುಪಯೋಗವಾಗುತ್ತಿದೆ.
ತಾಲೂಕಿನ ಹಲವು ಗ್ರಾಮ ಗಳಲ್ಲಿ ಕೆಟ್ಟು ಹೋಗಿ ನಿರುಪಯುಕ್ತಗೊಂಡಿರುವ ಬೋರ್ ವೆಲ್ ಗಳು ಸಾಕಷ್ಟು ಕಡೆಗಳಲ್ಲಿ ಕಂಡು ಬರುತ್ತಿದೆ.ಲಕ್ಷ ಗಟ್ಟಲೆ ಖರ್ಚು ಮಾಡಿ ಹೊಸ ಬೋರ್ ವೆಲ್ ಕೊರೆಯಿಸುವ ಬದಲು ಅತ್ಯಂತ ಕಡಿಮೆ ವೆಚ್ಚದಲ್ಲಿ ಇಂತಹ ಬೋರ್ ವೆಲ್ ನ್ನು ದುರಸ್ತಿ ಪಡಿಸುವ ಕಾರ್ಯ ಕೈಗೊಂಡಲ್ಲಿ ಆ ಪರಿಸರದ ನೀರಿನ ಸಮಸ್ಯೆ ಪರಿಹರಿಸಬಹುದು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕಾರ್ಯ ಪೃವೃತ್ತರಾದರೆ ಒಳ್ಳೆಯ ಬೆಳವಣಿಗೆಯಾಗಬಹುದು.