Breaking News

ಭಾರತೀಯ ತೀಯ ಸಮಾಜದ ವಾರ್ಷಿಕ ಮಹಾಸಭೆ, ನೂತನ ಸಮಿತಿ ರಚನೆ, ಪ್ರತಿಭಾ ಪುರಸ್ಕಾರ, ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ವಲಯದ ಭಾರತೀಯ ತೀಯ ಸಮಾಜದ ವಾರ್ಷಿಕ ಮಹಾಸಭೆಯು ಮಾ 28 ರಂದು ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರ.ಕಾರ್ಯದರ್ಶಿ ಪ್ರೇಮ್ ಚಂದ್ ಮಂಗಳೂರು, ದೇವದಾಸ್ ತುಂಬೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ ರವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಾಗೇಶ್ ಸಿ.ಕೆ.ಅಡ್ಕಾರ್, ಶಿಲ್ಪಾ ಸುದೇವ್ ಜಯನಗರ, ಪ್ರ.ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ, ಜತೆ ಕಾರ್ಯದರ್ಶಿ ಪುರುಷೋತ್ತಮ ನಾವೂರು, ವಿಜಯಲಕ್ಷ್ಮೀ ಜಯನಗರ, ಕೋಶಾಧಿಕಾರಿ ಸುನಿಲ್ ಕುಮಾರ್ ಕೆ.ಸಿ. ಪರಿವಾರಕಾನ, ಸಂಘಟನಾ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲ್, ಸದಸ್ಯರಾಗಿ ಅಮ್ಮಣ್ಣಿ ಅಡ್ಕಾರ್, ರಾಜೇಶ್ ಅಮೈ, ನಿತಿನ್ ಗುಂಡ್ಯ, ದಾಮೋದರ ಪರಮಂಡಲ, ಶ್ರೀಜಿತ್ ಅರಂತೋಡು, ಪ್ರದೀಪ್ ಕಿರ್ಲಾಯ, ಸುಂದರಿ ಮುಂಡಡ್ಕ, ಶ್ರೀಧರ ಕಡೆಪಾಲ, ಲೀಲಾವತಿ ವಿನೋಬನಗರ, ಗಣೇಶ್ ಅಂಬಾಡಿಮೂಲೆ, ರಾಧಾಕೃಷ್ಣ ಕುಕ್ಕುಜಡ್ಕ, ರಾಘವ ಕುಕ್ಕುಜಡ್ಕ, ಅನಿಲ್ ತೋಟಪ್ಪಾಡಿ, ಯತಿರಾಜ್ ಮಂಡೆಕೋಲು, ನಿರ್ಮಲಭರತ್, ಕುಸುಮ ಯೋಗೇಶ್ವರ್, ಸುಕುಮಾರ ಜಟ್ಟಿಪಳ್ಳ, ರಾಜೇಂದ್ರ ಬಿ ಯವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಎಸ್.ಎಸ್. ಎಲ್. ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮುದಾಯದ ಸದಸ್ಯರ ಪೈಕಿ ನಿವೃತ್ತ ಯೋಧ ರಾಜೇಂದ್ರ ಜಟ್ಟಿಪಳ್ಳ ರವರನ್ನು ಸನ್ಮಾನಿಸಲಾಯಿತು.ಈ ಬಾರಿಯ ನಗರ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಆಯ್ಕೆಯಾದ ಸಮಾಜ ಬಾಂಧವರನ್ನು ಅಭಿನಂದಿಸಿ ಗೌರವಿಸಲಾಯಿತು . ರಾಜೇಶ್ ಕುತ್ತಮೊಟ್ಟೆ ಪ್ರಾರ್ಥಿಸಿದರು. ಸುರೇಶ್ ಕುತ್ತಮೊಟ್ಟೆ ಸ್ವಾಗತಿಸಿದರು, ನಾಗೇಶ್ ಅಡ್ಕಾರ್ ವರದಿ ವಾಚಿಸಿದರು. ಸುನಿಲ್ ಕುಮಾರ್ ಕೆ .ಸಿ.ಪರಿವಾರಕಾನ ಲೆಕ್ಕ ಪತ್ರ ಮಂಡಿಸಿದರು. ಭಾಸ್ಕರ ಅಡ್ಕಾರ್ ವಂದಿಸಿದರು.ವಿಜಯಲಕ್ಷ್ಮೀ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯ ಬಾಂಧವರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.