ಐನೆಕಿದು ಗ್ರಾಮದ ಕೆಲ ಪರಿಶಿಷ್ಟ ಜಾತಿ ಮತ್ತು ಪ.ಪಂ ಕೆಲ ಫಲಾನುಭವಿಗಳಿಗೆ ನೀರಿನ ಟ್ಯಾಂಕನ್ನು ಏ.2 ರಂದು ವಿತರಿಸಲಾಯಿತು .
ಸುಬ್ರಹ್ಮಣ್ಯ ಗ್ರಾ.ಪಂ.ನ ಸ್ವಂತ ನಿಧಿಯಿಂದ ಈ ನೀರಿನ ಟ್ಯಾಂಕ್ ಗಳನ್ನು ವಿತರಿಸಲಾಗಿದೆ. ಈ ಸಂದರ್ಭ ಗ್ರಾ .ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಗ್ರಾ.ಪಂ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ದಿನೇಶ್ ರಾವ್, ಭಾರತಿ ಶಶಿಕಾಂತ್ ಮೂಕಮಲೆ, ವೆಂಕಟೇಶ್ ಎಚ್ ಎಲ್, ಶ್ರೀಮತಿ ದಿವ್ಯಾ ಯಶೋದಾಕೃಷ್ಣ, ಭಾರತಿ ದಿನೇಶ್ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಎಸ್ ಡಿ ಎಂ ಸಿ ಅಧ್ಯಕ್ಷ ಜಯರಾಮ ಕಟ್ರಮನೆ, ಗ್ರಾ .ಪಂ ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.