ಕ್ಯಾಂಪ್ಕೋ ಲಿ. ಮಂಗಳೂರು ಇದರ ಸಹಯೋಗದೊಂದಿಗೆ ಕಳಂಜ ಬಾಳಿಲ ಪ್ರಾಥಮಿಕ ಕೃ.ಪ.ಸ.ಸಂಘ ಬಾಳಿಲ ಶಾಖೆಯಲ್ಲಿ ಕಳಂಜ ಬಾಳಿಲ ರೈತ ಸ್ನೇಹಿತರ ಕೂಟದ ಸಹಕಾರದೊಂದಿಗೆ ರಬ್ಬರ್ ಖರೀದಿ ಕೇಂದ್ರದ ಉದ್ಘಾಟನೆಯು ಏ. 5ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ವಹಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ಪಿ.ಜಿ. ಕೃಷ್ಣಮೂರ್ತಿ ಬಾಳಿಲ ರಬ್ಬರ್ ಖರೀದಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಪಿ. ರಾಮಚಂದ್ರ ಭಟ್, ಡಿ. ಚಂದ್ರಶೇಖರ ಕಾಮತ್, ಜಿಮ್ಮಿ ಜೋಸೆಫ್, ಶ್ರೀನಾಥ್ ರೈ, ಸುಬ್ರಹ್ಮಣ್ಯ ಕೋಟೆ, ಶ್ರೀಮತಿ ಸವಿತಾ ಗುರುರಾಜ್ ಚಾಕೊಟೆಡ್ಕ ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ. ಉದ್ಘಾಟನೆಯ ದಿನದಂದು 50 ಕೆ.ಜಿ. ಗಿಂತ ಮೇಲ್ಪಟ್ಟು ರಬ್ಬರ್ ನೀಡಿದ ಕೃಷಿಕರಿಗೆ ಲಕ್ಕಿಡಿಪ್ ವ್ಯವಸ್ಥೆಯಿದ್ದು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ರೂ. 3000/-, ರೂ. 2000/-, ರೂ. 1000/- ದ ಜೀನಸಿ ಸಾಮಾಗ್ರಿಗಳನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.