ಆರೋಗ್ಯ ಇಲಾಖೆಯ ವಾಹನ ಚಾಲಕ ದಾಕೋಜಿಯವರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆರೋಗ್ಯ ಇಲಾಖೆಯಲ್ಲಿ ಸರಕಾರಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ಮಾ.೩೧ರಂದು ವಯೋನಿವೃತ್ತಿ ಹೊಂದಿದ ದಾಕೋಜಿಯವರಿಗೆ ಸಂಚಾರಿ ಗಿರಿಜನ ಆರೋಗ್ಯ ಘಟಕ, ಸುಳ್ಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಎ.೩ರಂದು ನಡೆಯಿತು.
ದಾಕೋಜಿಯವರು 1989 ರಲ್ಲಿ ಸುಳ್ಯ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಸರಕಾರಿ ವಾಹನ ಚಾಲಕರಾಗಿ ಸರಕಾರಿ ವೃತ್ತಿಗೆ ಪಾದಾರ್ಪಣೆ ಮಾಡಿದರು.
ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರುವಿಗೆ ವರ್ಗಾವಣೆಗೊಂಡರು. ಇವರು ಸುಮಾರು 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಮಾ.೩೧ರಂದು ವಯೋನಿವೃತ್ತಿ ಹೊಂದಿದರು.
ಇವರ ಪತ್ನಿ ಗೋಪಿ, ಇಬ್ಬರು ಪುತ್ರಿಯರು ವಿವಾಹವಾಗಿದ್ದು, ಇನ್ನೋರ್ವ ಪುತ್ರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಸುಳ್ಯ ಸಂಚಾರಿ ಗಿರಿಜನ ಆರೋಗ್ಯ ಘಟಕದ ಹಿರಿಯ ವೈದ್ಯಾಧಿಕಾರಿ ಡಾ.ನಂದಕುಮಾರ್ ನಿವೃತ್ತರಾದ ದಾಕೋಜಿ ಮತ್ತು ಅವರ ಪತ್ನಿ ಶ್ರೀಮತಿ ಗೋಪಿಯವರನ್ನು ಸನ್ಮಾನಿಸಿದರು. ಸಂಚಾರಿ ಗಿರಿಜನ ಆರೋಗ್ಯ ಘಟಕ, ತಾಲೂಕು ಆರೋಗ್ಯಧಿಕಾರಿ ಕಛೇರಿ, ಸಂಚಾರಿ ಆರೋಗ್ಯ ಘಟಕ, ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಘಟಕ, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ತಾಲೂಕು ಆರೋಗ್ಯಧಿಕಾರಿ ಕಛೇರಿಯ ಕ್ಷಯ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೊಕೇಶ್ ತಂಟೆಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.