ಆರೋಗ್ಯ ಇಲಾಖೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ಮಾ.೨ ರಂದು ವಯೋನಿವೃತ್ತಿ ಹೊಂದಿದ ಶ್ರೀಮತಿ ಸೀತಮ್ಮ ಪಿ.ರವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ ಎ.2ರಂದು ನಡೆಯಿತು.
ಶ್ರೀಮತಿ ಸೀತಮ್ಮರವರು 1988 ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಉಪಕೇಂದ್ರ ದೇವಚಳ್ಳದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸರಕಾರಿ ವೃತ್ತಿಗೆ ಪಾದಾರ್ಪಣೆ ಮಾಡಿದರು.
ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಉಪಕೇಂದ್ರ ನೆಲ್ಲೂರು ಕೆಮ್ರಾಜೆಗೆ ವರ್ಗಾಣೆಗೊಂಡರು. ಇವರು ಒಟ್ಟು 22 ವರ್ಷಗಳ ಕಾಲ ಸೇವಿ ಸಲ್ಲಿಸಿ ಮಾ.೩೧ ರಂದು ವಯೋನಿವೃತ್ತಿ ಹೊಂದಿದರು.
ಇವರ ಪತಿ ಸುಬ್ರಹ್ಮಣ್ಯ ಪಾರೆಪ್ಪಾಡಿ, ಪುತ್ರ ಶ್ರೀಕಾಂತ್ ಬಿ.ಎ. ಎಮ್.ಎಸ್.ಡಬ್ಲ್ಯೂ ಮಾಡಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
ಪುತ್ರಿ ಪತಸ್ವಿನಿ ವಿನ್ಯಾಸ್ ಪುಂಡಿಗದ್ದೆ ಬಿ.ಇ. ಎಮ್.ಟೆಕ್. ಪೂರೈಸಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ನಂದಕುಮಾರ್ ನಿವೃತ್ತರಾದ ಶ್ರೀಮತಿ ಸೀತಮ್ಮ ಪಿ. ಮತ್ತು ಅವರ ಪತಿ ಸುಬ್ರಹ್ಮಣ್ಯ ಪಾರೆಪ್ಪಾಡಿಯವರನ್ನು ಸನ್ಮಾಸಿದರು.
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಭಾನು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಲ್ಲವಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಶಿಕ್ ಸೇರಿದಂತೆ ಕೊಲ್ಲಮೊಗ್ರ ಮತ್ತು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಿವೃತ್ತರಿಗೆ ಶುಭ ಹಾರೈಸಿದರು.
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಲಲತಿ ಪ್ರಾರ್ಥಿಸಿ, ಉಬರಡ್ಕ ಮಿತ್ತೂರು ವ್ಯಾಪ್ತಿಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.