ಪೆರುವಾಜೆ ಗ್ರಾಮದ ಮುರ್ಕೆತ್ತಿ ಅಂಗನವಾಡಿ ಯಲ್ಲಿ ಸಂಜೀವಿನಿ ಯೋಜನೆಯ ಸ್ವಸಹಾಯ ಸಂಘ ರಚನೆಯ ಅಧ್ಯಕ್ಷತೆಯನ್ನು ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ವಹಿಸಿದ್ದರು.
ಸಂಜೀವಿನಿ ಯೋಜನೆಯ ಮೇಲ್ವಿಚಾರಕರಾದ ಮಹೇಶ್ ಸುಳ್ಯ ಇವರು ಸಂಘದ ಕಾರ್ಯಚಟುವಟಿಕೆ ಮತ್ತು ಸರಕಾರದ ಸವಲತ್ತು ಗಳ ಮಾಹಿತಿ ನೀಡಿದರು.ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ,
ಸಮುದಾಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಯಮುನಾ ಬಳ್ಪ , ಮೋಹನಾಂಗಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ 5 ಸ್ವಸಹಾಯ ಸಂಘ ರಚನೆ ಮಾಡಲಾಯಿತು. ಸ್ಪಂದನ ಸಂಘದ ಪ್ರತಿನಿಧಿ ಗಳಾಗಿ ನಯನ, ಸೌಮ್ಯ, ಜಲದುರ್ಗ ಸಂಘಕ್ಕೆ ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ಮೋಹಿನಿ, ಸ್ಟಾರ್ ಸಂಘಕ್ಕೆ ಆಯಿಷಾ,ಶಮೀರಾ, ಜ್ಞಾನ ದೀಪ ಸ್ತ್ರಿಶಕ್ತಿ ಸ್ವಸಹಾಯ ಸಂಘ ಕ್ಕೆ ಶ್ರೀಮತಿ ದೇವಕಿ, ಶ್ರೀಮತಿ ಜಯಲಕ್ಷ್ಮಿ .ಸೌಭಾಗ್ಯ ಸಂಘಕ್ಕೆ ಕವಿತಾ ಆಯ್ಕೆ ಯಾಗಿದ್ದಾರೆ.
ವಾರ್ಡ್ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಯಾಗಿ ಶ್ರೀಮತಿ ವಿಜಯಲಕ್ಷ್ಮೀ, ಕಾರ್ಯದರ್ಶಿ ಯಾಗಿ ನಯನ, ಕೋಶಾಧಿಕಾರಿ ಯಾಗಿ ಶಮೀರ ಆಯ್ಕೆಯಾಗಿದ್ದಾರೆ.