ಜಯನಗರ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಕೊರಂಬಡ್ಕದಲ್ಲಿ ಶ್ರೀ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಗಳ ಕಾಲಾವಧಿ ನೇಮೋತ್ಸವವು ನಡೆಯುತ್ತಿದ್ದು,
ನಿನ್ನೆ ಗಣಪತಿ ಹವನ, ಸಂಜೆ ಗುಳಿಗ ದೈವದ ನೇಮ ನಡೆಯಿತು.
ನಂತರ ದೀಪಾರಾಧನೆ, ನಾಗಬ್ರಹ್ಮ ದೇವರಿಗೆ ಮಹಾಪೂಜೆ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಂತರ ಮೊಗೇರ್ಕಳ ದೈವಗಳು ಗರಡಿ ಇಳಿದು, ಸತ್ಯದೇವತೆ ಶ್ರೀ ತನ್ನಿಮಾಣಿಗ ದೈವದ ನೇಮ ನಡೆಯಿತು. , ನಂತರ ಪಾತ್ರಿಗಳ ದರ್ಶನ ನಡೆಯಿತು.
ಇಂದು ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಕಾರಣಿಕ ದೈವ-ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು.
https://youtube.com/shorts/zXeM36fZVFI
ಸಮಿತಿಯ ಪದಾಧಿಕಾರಿಗಳು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.