ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸುವುದರೊಂದಿಗೆ ಸ್ವಚ್ಚ ನೈರ್ಮಲ್ಯ ಪರಿಸರ ಹಾಗೂ ಉತ್ತಮ ನಾಗರಿಕ ಸಹಭಾಳ್ವೆಯ ಗುರಿಯನ್ನು ಸಾಧಿಸೋಣ : ಎಸ್.ಎನ್ .ಮನ್ಮಥ

ಎಪ್ರಿಲ್-04 ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಆಗುತ್ತಿರುವ ಹಿನ್ನಲೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ 75 ವಾರಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರ್ದೇಶನ ನೀಡಿರುತ್ತವೆ.
ಈ ಹಿನ್ನೆಲೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಸ್ವಚ್ಚ ಭಾರತ್ ಸಮಿತಿ ಹಾಗೂ ವರ್ತಕರ ಸಂಘದ ಸಹಯೋಗದಲ್ಲಿ “ಸ್ವಚ್ಚ ಸ್ವಾತಂತ್ರ ಶ್ರಮದಾನ ಸಂಭ್ರಮ ಕಾರ್ಯಕ್ರಮಕ್ಕೆ ಐವರ್ನಾಡು ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಬೆಳ್ಳಾರೆ ಕ್ಷೇತ್ರದ ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ ಚಾಲನೆ ನೀಡಿ ಮಾತನಾಡಿ ನಮ್ಮ ಮುಂದಿನ ತಲೆಮಾರಿಗೆ ಹಾಗೂ ಇಂದಿನ ಯುವ ಜನತೆಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ,ಬಲಿದಾನಗಳನ್ನು ನೆನಪಿಸುವುದರೊಂದಿಗೆ ಸ್ವಚ್ಚ ನೈರ್ಮಲ್ಯ ಪರಿಸರ ನಿರ್ಮಿಸುವುದರೊಂದಿಗೆ ಉತ್ತಮ ನಾಗರಿಕ ಸಹಭಾಳ್ವೆಯ ಗುರಿಯನ್ನು ಸಾಧಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ,ವರ್ತಕರ ಸಂಘದ ಅಧ್ಯಕ್ಷ ಕರುಣಾಕರ ಗೌಡ ನೆಕ್ರೆಪ್ಪಾಡಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಸ್ವಸಹಾಯ ಸಂಘದ ಸದಸ್ಯರು,ಸಂಘ ಸಂಸ್ಥೆಗಳ ಪ್ರತಿನಿಧಿಗಳು ,ವರ್ತಕರು ಹಾಗೂ ಸ್ವಚ್ಚ ಗೃಹಿಗಳು ಹಾಗೂ ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ನಂತರ ಐವರ್ನಾಡು ಪೇಟೆಯಿಂದ ಮರ್ವತ್ತಡ್ಕದವರೆಗೆ ರಸ್ತೆ ಬದಿಯ ಪರಿಸರವನ್ನು ಶುಚಿಗೊಳಿಸಲಾಯಿತು ಸುಮಾರು 100 ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರ್ತಕರ ಸಂಘದ ಅಧ್ಯಕ್ಷ ಕರುಣಾಕರ ಗೌಡ ನೆಕ್ರೆಪ್ಪಾಡಿ ಸ್ವಾಗತಿಸಿದರು.ಪ್ರಾಸ್ತಾವಿಕ ಮಾತನ್ನಾಡಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಯು.ಡಿ ಶೇಖರ್ ರವರು 75 ವಾರಗಳಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.