ಸುಳ್ಯದ ಗಾಂಧಿನಗರದ ಅಲ್ ಅಮೀನ್ ಆರ್ಕೇಡ್ನಲ್ಲಿರುವ ಕರಾವಳಿ ಮೊಬೈಲ್ಸ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿವೋ X6೦ ಮೊಬೈಲ್ನ್ನು ಎ.2 ರಂದು ಯುವ ಉದ್ಯಮಿ ಝಿಯಾದ್ರವರು ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ವಿವೋ ಟೀಮ್ ಲೀಡರ್ ಭುವನೇಶ್ರವರು ಮತ್ತು ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಕ್ಕಿಕೂಪನ್ ಡ್ರಾ ವಿಜೇತರಿಗೆ ಬಂಪರ್ ಬಹುಮಾನ ವಿತರಣೆ ಮಾಡಲಾಯಿತು. ಬಹುಮಾನ ವಿತರಣೆಯನ್ನು ರಘು ಸಿ.ಆರ್.ಕೆ ರವರು ವಿತರಿಸಿದರು.
ಗ್ರೈಂಡರ್ ವಿಜೇತರಾಗಿ ಶರತ್ ನಾಗಪಟ್ಟಣ, ಮಿಕ್ಸರ್ ಗೈಂಡರ್ ವಿಜೇತರಾಗಿ ರವಿ ಮರ್ಕಂಜ, ಗ್ಯಾಸ್ ಸ್ಟೌವ್ ವಿಜೇತರಾಗಿ ಜಿತೇಶ್ ಕೆ ಸುಳ್ಯ, ಕುಕ್ಕರ್ ವಿಜೇತರಾಗಿ ಹರ್ಷಿತಾ ಧ್ಯಾನ್ತೀರ್ಥ, ಜಯಂತ ಪೆರಾಜೆ , ತವ ವಿಜೇತರಾಗಿ ಫೈಝಲ್ ಪೈಂಬೆಚ್ಛಾಲ್, ಕೃತೇಶ್ ಮುಡೂರು, ಭಾಸ್ಕರ್, ನೆಕ್ಬ್ಯಾಂಡ್ ವಿಜೇತರಾಗಿ ಪುಂಡರೀಕ, ಲಿಂಗಪ್ಪ, ಇಕ್ಬಾಲ್ ಬೋರುಗುಡ್ಡೆ, ವಾಣಿ ಕೆ.ಜೆ ಸಂಪಾಜೆ, ನಾಸಿರ್ ವಿಜೇತರಾದರು. ಎಲ್ಲಾ ಬಹುಮಾನ ವಿಜೇತರು ಏ.೫ರೊಳಗೆ ಲಕ್ಕಿ ಕೂಪನ್ ಮೂಲಪ್ರತಿಯನ್ನು ತಂದು ಬಹುಮಾನವನ್ನು ಪಡೆದುಕೊಳ್ಳಬಹುದು. ನಂತರ ಬಂದಲ್ಲಿ ಪರಿಗಣಿಸಲಾಗುವುದಿಲ್ಲ.